ಬೆಂಗಳೂರು: ರಸ್ತೆಯಲ್ಲಿ ಬಾಲಕಿ ತಬ್ಬಿಕೊಂಡು ಅನುಚಿತವಾಗಿ ವರ್ತಿಸಿದ ಕಿಡಿಗೇಡಿಯನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪುರ ನಿವಾಸಿ ಮೊಹಮ್ಮದ್ ಶರೀಫ್ ಬಂಧಿತ ಆರೋಪಿಯಾಗಿದ್ದಾನೆ. ರಸ್ತೆಯಲ್ಲೇ ಬಾಲಕಿಯನ್ನು ತಬ್ಬಿಕೊಂಡು ಶರೀಫ್ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ನೊಂದ ಬಾಲಕಿ ಶರೀಫ್ ವಿರುದ್ಧ ಗೋವಿಂದಪುರ ಠಾಣೆಗ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.