ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಗ್ರಾಹಕರಿಗೆ ಸೇವೆಗಳನ್ನು ಮತ್ತಷ್ಟು ಸುಲಭವಾಗಿಸಿದೆ. ಇಪಿಎಫ್ ಸೇವೆಗಳನ್ನು ಡಿಜಿ ಲಾಕರ್ ಜೊತೆಗೆ ಸಂಯೋಜಿಸಲಾಗಿದೆ.
ಇಪಿಎಫ್ಒ ಖಾತೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್, ಪಾಸ್ ಬುಕ್ ಡೌನ್ಲೋಡ್ ಸೇರಿದಂತೆ ಅನೇಕ ಸೇವೆಗಳನ್ನು ತಾವು ಇರುವಲ್ಲಿಯೇ ಡಿಜಿ ಲಾಕರ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಮತ್ತು ಕಾಗದ ಪತ್ರಗಳ ಅಗತ್ಯವಿಲ್ಲದೇ ಅವುಗಳನ್ನು ಸಂಸ್ಥೆಗಳಿಗೆ ಸರ್ಕಾರಿ ಇಲಾಖೆಗಳಿಗೆ ಕಳುಹಿಸಬಹುದಾಗಿದೆ.
ಇಪಿಎಫ್ ಖಾತೆದಾರರು ಡಿಜಿ ಲಾಕರ್ ಪ್ರವೇಶಿಸುವ ಮೂಲಕ ಯುಎನ್ ಕಾರ್ಡ್, ಪಿಂಚಣಿ ಪಾವತಿ ಆದೇಶ ಮತ್ತು ಸ್ಕೀಮ್ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಪ್ರಸ್ತುತ ಪಾಸ್ ಬುಕ್ ಡೌನ್ಲೋಡ್ ಸೌಲಭ್ಯ ಉಮಾಂಗ್ ಅಪ್ಲಿಕೇಶನ್ ನಲ್ಲಿ ಇತ್ತು. ಈಗ ಡಿಜಿ ಲಾಕರ್ ಅನ್ನು ಕೂಡ ಬಳಸಬಹುದಾಗಿದೆ.
ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯವಿದ್ದು, ಶೀಘ್ರದಲ್ಲಿಯೇ ಐಒಎಸ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ.