ನವದೆಹಲಿ : ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಮುಂಬೈನಲ್ಲಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಶೋಧ ನಡೆಸಿತು.
ಅಂಬಾನಿ ಅವರ ವೈಯಕ್ತಿಕ ನಿವಾಸವು ಶೋಧ ಕಾರ್ಯಾಚರಣೆಯ ಭಾಗವಾಗಿಲ್ಲದಿದ್ದರೂ, ದೆಹಲಿ ಮತ್ತು ಮುಂಬೈನ ಇಡಿ ತಂಡಗಳು ಅವರ ಗುಂಪಿನ ಕೆಲವು ಕಂಪನಿಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತನಿಖೆಯು RAAGA (ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್) ಕಂಪನಿಗಳಿಂದ ನಡೆದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದೆ.
ರಾಷ್ಟ್ರೀಯ ವಸತಿ ಬ್ಯಾಂಕ್, ಭಾರತೀಯ ಭದ್ರತಾ ಮಂಡಳಿ (ಸೆಬಿ), ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್ಎಫ್ಆರ್ಎ), ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವು ನಿಯಂತ್ರಕ ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಮಾಹಿತಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಎರಡು ಎಫ್ಐಆರ್ಗಳನ್ನು ಆಧರಿಸಿ ಇಡಿ ಕ್ರಮ ಕೈಗೊಳ್ಳಲಾಗಿದೆ.
Subsequent to recording of FIRs by CBI , ED started investigating the alleged offence of Money Laundering by RAAGA Companies (Reliance Anil Ambani Group Companies). Other agencies & institutions also shared information with ED, such as- The National Housing Bank, SEBI, National…
— ANI (@ANI) July 24, 2025