ರಾಯಚೂರು : ಬೈಕ್ ಮೇಲೆ ಆಲದ ಮರ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗಲಾಪುರದಲ್ಲಿ ನಡೆದಿದೆ.
ದಂಪತಿಗಳು ತಮ್ಮ ಪುತ್ರಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೃಹತ್ ಗಾತ್ರದ ಆಲದ ಮರ ಬೈಕ್ ಮೇಲೆ ಬಿದ್ದಿದೆ. ಪರಿಣಾಮ ರಮೇಶ್ (25) ಮಂಜುಳಾ (23) ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 3 ವರ್ಷದ ಪುತ್ರಿ ಸೌಜನ್ಯ ಗಾಯಗೊಂಡಿದ್ದಾಳೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
TAGGED:ದಂಪತಿ
