ರೌಡಿಶೀಟರ್ ‘ಬಿಕ್ಲು ಶಿವ’ ಹಂತಕರ ತಂಡದಲ್ಲಿ ‘ಪದವಿ’ ವಿದ್ಯಾರ್ಥಿ : 1.13 ಲಕ್ಷ ಸುಪಾರಿ ಪಡೆದಿದ್ದ ನಾಲ್ವರು  ಅರೆಸ್ಟ್.!

ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ ಎಂಬಂತೆ ಕೊಲೆಗೆ ಸುಪಾರಿ ಪಡೆದಿದ್ದ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನದ ಬಳಿಕ ಹಲವು ಸ್ಪೋಟಕ ಮಾಹಿತಿಗಳು ಬಯಲಾಗುತ್ತಿದೆ.

ಬಿಕ್ಲು ಶಿವ ಹಂತಕರ ತಂಡದಲ್ಲಿ ಪದವಿ ವಿದ್ಯಾರ್ಥಿಯೋರ್ವ ಇರುವುದು ಗೊತ್ತಾಗಿದೆ. ರೌಡಿಸಂ ಬಗ್ಗೆ ಕ್ರೇಜ್ ಹೊಂದಿದ್ದ ವಿದ್ಯಾರ್ಥಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನರಸಿಂಹ ಎಂಬ ಆರೋಪಿ ಸರ್ಕಾರಿ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದನು. ಕಾಲೇಜಿನಲ್ಲಿದ್ದಾಗಲೇ ಈತನಗೆ ರೌಡಿಸಂ ಬಗ್ಗೆ ಬಹಳ ಕ್ರೇಜ್ ಇತ್ತು. ಇನ್ನುಳಿದ ಆರೋಪಿಗಳು ಗಾರೆ ಕೆಲಸ, ಆಟೋ ಓಡಿಸಿ ಜೀವನ ನಡೆಸುತ್ತಿದ್ದರು. ರೌಡಿಸಂ ಬಗ್ಗೆ ಕ್ರೇಜ್ ಇರುವ ವಿದ್ಯಾರ್ಥಿಗಳನ್ನ ಬಿಕ್ಲು ಶಿವ ಕೊಲೆಗೆ ಹತ್ಯೆಗೆ ಸಜ್ಜು ಮಾಡಲಾಗಿತ್ತು.

1.13 ಲಕ್ಷ ಸುಪಾರಿ ಪಡೆದಿದ್ದ ಗ್ಯಾಂಗ್
ಕೋಲಾರ ಜಿಲ್ಲೆಯ ಮಾಲೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸಿಪಿ ರಂಗಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.ರೌಡಿಶೀಟರ್ ಬಿಕ್ಲು ಶಿವ ಕೊಲೆ ಮಾಡಲು ಗ್ಯಾಂಗ್ ಒಂದೂವರೆ ಲಕ್ಷ ಹಣ ಸುಪಾರಿ ಪಡೆದಿತ್ತು ಎನ್ನಲಾಗಿದೆ. ನರಸಿಂಹ ಎಂಬಾತನ ಗ್ಯಾಂಗ್ ಕೊಲೆ ಮಾಡಲು ಸುಪಾರಿ ಪಡೆದಿದ್ದಿತ್ತು. ನರಸಿಂಹ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ.

ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದ್ದು, ಬೈರತಿ ಬಸವರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಭಾರತಿನಗರ ಠಾಣೆಯಲ್ಲಿ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮಾಜಿ ಸಚಿವ ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಜಗದೀಶ್ ಎ1, ಕಿರಣ್ ಎ2, ವಿಮಲ್ ಎ 3, ಅನಿಲ್ ಎ4 ರೋಪಿಗಳಾಗಿದ್ದಾರೆ.
ಕಿತ್ತನೂರು ಜಾಗದ ವಿಚಾರವಾಗಿ ರೌಡಿಶೀಟರ್ ಶಿವಪ್ರಕಾಶ್ ಕೊಲೆ ಮಾಡಲಾಗಿದೆ. ಬಿಳಿಬಣ್ಣದ ಸ್ಕಾರ್ಪಿಯೋದಲ್ಲಿ 8-9 ಜನರು ಬಂದು ಶಿವಪ್ರಕಾಶ್ ಗೆ ಬೆದರಿಕೆ ಹಾಕಿದ್ದರು. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಾಯಿ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read