SHOCKING : ‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಮರ್ಡರ್ : ಲವರ್ ಜೊತೆ ಸೇರಿ ಪತಿಯನ್ನು ಕೊಂದು ಟೈಲ್ಸ್ ಕೆಳಗೆ ಹೂತಿಟ್ಟ ಪತ್ನಿ.!

ಮುಂಬೈ : ಮಹಾರಾಷ್ಟ್ರದಲ್ಲಿ ‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಮರ್ಡರ್ ನಡೆದಿದ್ದು, ಲವರ್ ಜೊತೆ ಸೇರಿ ಪತಿಯನ್ನು ಕೊಂದು ಟೈಲ್ಸ್ ಕೆಳಗೆ ಹೂತಿಟ್ಟ ಘಟನೆ ನಡೆದಿದೆ. ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವಿಜಯ್ ಚವಾಣ್ ಎಂಬಾತ ಕೊಲೆಯಾದ ವ್ಯಕ್ತಿ. ಕೋಮಲಾ ಎಂಬ ಮಹಿಳೆ ತನ್ನ ಲವರ್ ಜೊತೆ ಈ ಕೃತ್ಯ ಎಸಗಿದ್ದಾಳೆ.

35 ವರ್ಷದ ವಿಜಯ್ ಚವಾಣ್ ಅವರು ತಮ್ಮ 28 ವರ್ಷದ ಪತ್ನಿ ಕೋಮಲ್ ಚವಾಣ್ ಅವರೊಂದಿಗೆ ಮುಂಬೈನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ನಲಸೋಪರ ಪೂರ್ವದ ಗಡ್ಗಪದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ 15 ದಿನಗಳಿಂದ ವಿಜಯ್ ಚವಾಣ್ ಕಾಣೆಯಾಗಿದ್ದರು.

ವಿಜಯ್ ಅವರನ್ನು ಹುಡುಕುತ್ತಿದ್ದ ಅವರ ಸಹೋದರರು ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ ಅನುಮಾನಗೊಂಡು ನೋಡಿದಾಗ ಕೆಲವು ನೆಲದ ಟೈಲ್ಸ್ಗಳು ಉಳಿದವುಗಳ ಬಣ್ಣಗಳ ಜೊತೆ ಹೊಂದಿಕೆಯಾಗಿರಲಿಲ್ಲ. ಅನುಮಾನಾಸ್ಪದವಾಗಿ, ಅವರು ವಿಭಿನ್ನ ಬಣ್ಣದ ಟೈಲ್ಸ್ಗಳನ್ನು ತೆಗೆದರು, ಆದರೆ ಕೆಳಗೆ ಹೂತುಹೋಗಿದ್ದ ಚೀಲ ಕಂಡು ಬಂದಿದ್ದು, ಮತ್ತು ಕೆಟ್ಟ ವಾಸನೆ ಬರತೊಡಗಿತು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಬಂದು ವಿಜಯ್ ಶವ ಪತ್ತೆ ಮಾಡಿದ್ದಾರೆ.

ಕೋಮಲ್ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ನೆರೆಹೊರೆಯ ಮೋನು ಜೊತೆ ಸೇರಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಸೇರಿ ವಿಜಯ್ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈಗ ಪ್ರಕರಣದಲ್ಲಿ ಕೋಮಲಾ ಹಾಗೂ ಲವರ್ ಬಾಯ್ ಮೋನು ಪ್ರಮುಖ ಆರೋಪಿಗಳಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read