ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ನಟಿಯರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶ್ ರಾಜ್, ಮಂಚುಲಕ್ಷ್ಮಿ ಅವರಿಗೆ ಇಡಿ ನೋಟಿಸ್ ಜಾರಿಗೊಳಿಸಿದೆ. ಜುಲೈ 23 ರಂದು ವಿಚಾರಣೆಗೆ ಹಾಜರಾಗಲು ರಾಣಾ ದಗ್ಗುಬಾಟಿಗೆ ಸೂಚನೆ ನೀಡಲಾಗಿದೆ.
ಜುಲೈ 30 ರಂದು ವಿಚಾರಣೆಗೆ ಬರುವಂತೆ ಪ್ರಕಾಶ್ ರಾಜ್ ಗೆ ತಿಳಿಸಲಾಗಿದೆ.
ಆಗಸ್ಟ್ 3ರಂದು ವಿಚಾರಣೆಗೆ ಬರಲು ವಿಜಯ ದೇವರಕೊಂಡ ಅವರಿಗೆ ಸೂಚನೆ ನೀಡಲಾಗಿದೆ.
ಆಗಸ್ಟ್ 13ರಂದು ವಿಚಾರಣೆಗೆ ಬರಲು ಮಂಜು ಲಕ್ಷ್ಮಿಗೆ ನೋಟಿಸ್ ಜಾರಿಗೊಳಿಸಲಾಗಿದೆ