ಮೈಸೂರು: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಂದ್ದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತುರುಗನೂರು ಗ್ರಾಮದ ಕುಮಾರ್ ಮೃತ ವ್ಯಕ್ತಿ. ಜುಲೈ 19ರಂದು ಮೈಸೂರಿನಲ್ಲಿ ಕಾಂಗ್ರೆಸ್ ನ ಸಾಧನಾ ಸಮಾವೇಶ ನಡೆದಿತ್ತು. 300 ರೂಪಾಯಿ ಕೊಡುತ್ತೇವೆ ಎಂದು ಸಮಾವೇಶಕ್ಕೆ ತುರುಗೂರಿನ ಕಾಂಗ್ರೆಸ್ ಮುಖಂಡರು ಕುಮಾರ್ ನನ್ನು ಕರೆತಂದಿದ್ದರು. ಕಾಂಗ್ರೆಸ್ ಸಮಾವೇಶ ಮುಗಿದರೂ ಕುಮಾರ್ ಮನೆಗೆ ವಾಪಸ್ ಹೋಗಿಲ್ಲ. ರಾತ್ರಿಯಾದರೂ ಕುಮಾರ್ ಮನೆಗೆ ಬಾರದಿರುವುದನ್ನು ಕಂದು ಗಾಬರಿಯಾದ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಬನ್ನೂರು ಠಾಣೆಗೆ ದೂರು ನೀಡಲು ಹೋಗಿದ್ದ ವೇಳೆ ಮೈಸೂರು ನಗರ ಠಾಣೆಯಲ್ಲಿ ದೂರು ನೀಡಿ ಎಂದು ಪೊಲೀಸರು ಸೂಚಿಸಿದ್ದಾರೆ. ಮೈಸೂರು ಠಾಣೆಯಲ್ಲಿ ದೂರು ನೀಡಲಾಗಿದ್ದು, ಇಂದು ಮೈಸೂರಿನ ಶವಾಗಾರದಲ್ಲಿ ಕುಮಾರ್ ಮೃತದೇಹ ಪತ್ತೆಯಾಗಿದೆ.
ಮದ್ಯಪಾನ ಜಾಸ್ತಿಯಾಗಿ ಕುಮಾರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದುದೆ. ಸಮಾವೇಶಕ್ಕೆ ಕರೆದುಕೊಂಡು ಹೋದವರೇ ಕುಮಾರ್ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.