ನವದೆಹಲಿ : ವಿಪಕ್ಷಗಳಿಂದ ಭಾರಿ ಗದ್ದಲ ಉಂಟಾದ ಹಿನ್ನೆಲೆ ಲೋಕಸಭಾ ಕಲಾಪ ಇಂದು ಮಧ್ಯಾಹ್ನ 2 ಕ್ಕೆ ಮುಂದೂಡಿಕೆಯಾಗಿದೆ.ಕಲಾಪ ಮುಂದೂಡಿ ಸ್ಪೀಕರ್ ಓಂಬಿರ್ಲಾ ಆದೇಶಿಸಿದ್ದಾರೆ.
ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಆರಂಭದಲ್ಲೇ ಗದ್ದಲ ಉಂಟಾಗಿದೆ. ಇದನ್ನೂ ಮೊದಲು ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು.
ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ದಾಳಿಯ ಬಗ್ಗೆ ಚರ್ಚಿಸಲು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಲೇ ಇದ್ದುದರಿಂದ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗಳವರೆಗೆ ಮುಂದೂಡಲಾಯಿತು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ನಿಖರವಾದ ದಾಳಿ ಆಪರೇಷನ್ ಸಿಂದೂರ್ ನಂತರ ಇದು ಮೊದಲ ಬಾರಿಗೆ ಈ ಅಧಿವೇಶನ ಮಹತ್ವದ್ದಾಗಿದೆ.
Lok Sabha adjourned till 1400 hours as Opposition MPs continue raising slogans demanding discussion on Operation Sindoor and Pahalgam attack. pic.twitter.com/x7iKGuVV0B
— ANI (@ANI) July 21, 2025
#WATCH | Delhi | Congress MP Mandadi Anil Kumar Yadav says, "We have seen the past practices of the government, the way they try to mislead the parliament sessions…They try to create some controversy and try to disturb the house…" pic.twitter.com/fBDMRqvUGx
— ANI (@ANI) July 21, 2025