ದಾವಣಗೆರೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ರಂಭಾಪುರಿ ಶ್ರೀಗಳು ವಾಗ್ದಾಳಿ ನಡೆಸಿದ್ದಾರೆ. ಕಳೆದ ಅವಧಿಯಲ್ಲಿ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಯಿತು ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸಿದವರ ಮೇಲೆಯೇ ಲಾಠಿಚಾರ್ಜ್ ಮಾಡಿದರು. ಅದೇ ಸರ್ಕಾರ ಲಾಠಿಚಾರ್ಜ್ ಮಾಡಿರುವುದು ನಮಗೆ ಬೇಸರವಾಗಿದೆ ಎಂದು ದಾವಣಗೆರೆಯಲ್ಲಿ ಸಿಎಂ ವಿರುದ್ಧ ರಂಭಾಪುರಿ ಸ್ವಾಮೀಜಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರು 60 ಲಕ್ಷ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಕೇವಲ 60 ಲಕ್ಷ ಜನ ಸಂಖ್ಯೆ ಇದೆ ಎಂದು ಹೇಳಲಾಗಿದೆ. ಈಗ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತಿದೆ. ವೀರಶೈವ ಲಿಂಗಾಯತರು ಒಳಪಂಗಡಗಳನ್ನು ಮರೆತು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಇತ್ತೀಚೆಗೆ ವೀರಶೈವ ಲಿಂಗಾಯತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಂಭಾಪುರಿ ಪೀಠದ ಸ್ವಾಮೀಜಿ ಹೇಳಿದ್ದಾರೆ.
ಪಂಚಪೀಠಗಳು ಹಾಗೂ ಶಿವಾಚಾರ್ಯರು ಒಂದೇ ವೇದಿಕೆಗೆ ಬಂದ ಬಳಿಕ ವಿರಕ್ತರು ಸಹ ನಮ್ಮೊಂದಿಗೆ ಬರಲಿದ್ದಾರೆ. ಹತ್ತಾರು ಕಾರಣಕ್ಕೆ ವೀರಶೈವ ಪಂಚಪೀಠಗಳು ಪ್ರತ್ಯೇಕ ಆಗಿದ್ದವು. ದಾವಣಗೆರೆಯಲ್ಲಿ ಜುಲೈ 21, 22 ರಂದು ಶೃಂಗ ಸಮ್ಮೇಳನ ನಡೆಯಲಿದೆ. ಪೀಠಾಚಾರ್ಯರು ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯಲಿದೆ. ಮೊದಲು ನಾವು ಒಂದಾಗಿ ನಂತರ ವಿರಕ್ತರು ಬಸವಾದಿಗಳನ್ನು ಒಂದೇ ವೇದಿಕೆಗೆ ತರುವ ಸಂಕಲ್ಪವಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.