ಪ್ರೀತಿಸುವಂತೆ ಮಹಿಳೆಯ ಹಿಂದೆ ಬಿದ್ದ ಯುವಕ: ಮಾತುಕತೆಗೆಂದು ಬಂದು ಕತ್ತು ಕೊಯ್ದು ಕೊಲೆ ಯತ್ನ: ಆರೋಪಿ ಅರೆಸ್ಟ್

ಬೆಂಗಳೂರು: ಮದುವೆಯಾಗಿದ್ದ ಮಹಿಳೆಯ ಹಿಂದೆ ಬಿದ್ದಿದ್ದ ಯುವಕನೊಬ್ಬ, ಮಾತುಕತೆಗೆಂದು ಬಂದವನು ಮಹಿಳೆಯ ಸಹೋದರನ ಕತ್ತು ಕೊಯ್ದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಹೆಚ್ ಎ ಎಲ್ ಬಳಿ ನಡೆದಿದೆ.

ಸೆಲ್ವ ಕಾರ್ತಿಕ್ ಕೊಲೆ ಯತ್ನ ನಡೆಸಿರುವ ಆರೋಪಿ. ತಮಿಳುನಾಡು ಮೂಲದವನು. ಸೆಲ್ವ ಕಾರ್ತಿಕ್ ಗೆ ಇನ್ ಸ್ಟಾ ಗ್ರಾಂ ನಲ್ಲಿ ಮದುವೆಯಾಗಿದ್ದ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಮಹಿಳೆಗೆ ತನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ವಿಚಾರವನ್ನು ಮಹಿಳೆ ತನ್ನ ಪತಿಗೆ ತಿಳಿಸದೇ ನೇರವಾಗಿ ತನ್ನ ತಂದೆಗೆ ಹೇಳಿದ್ದಳು. ಮಹಿಳೆಯ ತಂದೆ ಹಾಗೂ ಸಹೋದರ ಸೆಲ್ವ ಕಾರ್ತಿಕ್ ನನ್ನು ಮಾತುಕತೆಗೆ ಬರುವಂತೆ ಹೆಚ್ ಎ ಎಲ್ ಬಳಿ ಕರೆದಿದ್ದಾರೆ.

ಹೆಚ್ ಎ ಎಲ್ ಬಳಿ ಬಂದ ಸೆಲ್ವ ಕಾರ್ತಿಕ್ ನನ್ನು ಮಹಿಳೆಯ ಸಹೋದರ ಪ್ರಶಾಂತ್ ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ತೆರಳುತ್ತಿದರು. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಸೆಲ್ವ ಕಾರ್ತಿಕ್ ಪ್ರಶಾಂತ್ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ. ಗಾಯಾಳು ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಪಿ ಸೆಲ್ವ ಕಾರ್ತಿಕ್ ನನ್ನು ಹೆಚ್ ಎ ಎಲ್ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read