ಗಾಂಧಿನಗರ: ಎಎಸ್ ಐ ಆಗಿದ್ದ ಲಿವ್-ಇನ್ ಗೆಳತಿಯನ್ನೇ ಹತ್ಯೆಗೈದ ಸಿಆರ್ ಪಿಎಫ್ ಯೋಧನೊಬ್ಬ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಗುಜರಾತ್ ನ ಕಚ್ ಜಿಲ್ಲೆಯ ಅಂಜಾರ್ ನಲ್ಲಿ ನಡೆದಿದೆ.
ಅರುಣಾಬೆನ್ ನಟುಭಾಯಿ ಜಾದವ್ (25) ಕೊಲೆಯಾದ ಎ ಎಸ್ ಐ ಎಂದು ಗುರುತಿಸಲಾಗಿದೆ. ಅರುಣಾಬೆನ್ ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿ ದಿಲಿಪ್ ಡಾಂಗ್ಜಿಯಾ ಸಿಆರ್ ಪಿಎಫ್ ಯೋಧ. ಇಬ್ಬರೂ ಕೆಲ ವರ್ಷಗಳಿಂದ ಲಿವ್-ಇನ್ ರಿಲೇಷನ್ ಶಿಪ್ ನಲ್ಲಿದ್ದು ಒಟ್ಟಿಗೆ ವಾಸವಾಗಿದರು.
ಅರುಣಾ ಬೆನ್ ಹಾಗೂ ದಿಲೀಪ್ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ-ಪ್ರೇಮ ಶುರುವಾಗಿದ್ದು, ಇಬ್ಬರೂ ಜೊತೆಯಲ್ಲೇ ವಾಸವಾಗಿದ್ದರು. ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಅರುಣಾಬೆನ್ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾಳೆ. ಇದರಿಂದ ಕೋಪಗೊಂಡು ಆಕೆಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ದಿಲೀಪ್ ಹೇಳಿಕೆ ನೀಡಿದ್ದಾನೆ. ಕೊಲೆ ಬಳಿಕ ಠಾಣೆಗೆ ಬಂದು ಶರಣಾಗಿರುವ ಯೋಧನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.