ವಿದ್ಯುತ್ ಅವಘಡದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೈದುನನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ ಅರೆಸ್ಟ್!

ನವದೆಹಲಿ: ವಿದ್ಯುತ್ ಅವಘಡದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುನನ ಜೊತೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಕರಣ್ ದೇವ್ (36) ಕೊಲೆಯಾದ ವ್ಯಕ್ತಿ. ಸುಷ್ಮಿತಾ ಪತಿಯನ್ನೇ ಕೊಂದ ಮಹಿಳೆ. ಜು.13ರಂದು ಪತಿ ಕರಣ್ ದೇವ್ ಅವರನ್ನು ಸುಷ್ಮಿತಾ ಮಾತಾ ರೂಪಾನಿ ಆಸ್ಪತ್ರೆಗೆ ದಾಖಲಿಸಿದ್ದಳು. ಆಕಸ್ಮಿಕ ವಿದ್ಯುತ್ ಅಪಘಾತವಾಗಿದೆ ಎಂದಿದ್ದಳು. ಆದರೆ ತಪಾಸಣೆ ನಡೆಸಿದಾಗ ಕರಣ್ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ವ್ಯಕ್ತಿಯ ವಯಸ್ಸು, ಸಾವಿನ ಸಂದರ್ಭ ಉಲ್ಲೇಖಿಸಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು. ಆದರೆ ಪತ್ನಿ ಹಾಗೂ ಆತನ ಸೋದರ ಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಪೊಲೀಸರು ಮೃತದೇಹವನ್ನು ದೀನ್ ದಯಾಳ್ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಕರಣ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಕಿರಿಯ ಸಹೋದರ ಕುನಾಲ್ ಕೊಲೆ ಕೇಸ್ ದಾಖಲಿಸಿದ್ದಾರೆ. ಸುಷ್ಮಾ ಹಾಗೂ ರಾಹುಲ್ ನ ಇನ್ ಸ್ಟಾ ಗ್ರಾಂ ಚಾಟ್ ನ ಪುರಾವೆಗಳನ್ನೂ ಒದಗಿಸಿದ್ದಾನೆ. ಚಾಟ್ ನಲ್ಲಿ ಇಬ್ಬರೂ ಕೊಲೆ ಬಗ್ಗೆ ಸಂಚು ರೂಪಿಸಿರುವುದು ಬಯಲಾಗಿದೆ. ಕರಣ್ ದೇವ್ ಪತ್ನಿ ಸುಷ್ಮಿತಾ ಹಾಗೂ ಮೈದುನ ರಾಹುಲ್ ನಡುವೆ ಅಕ್ರಮ ಸಂಬಂಧವಿದ್ದು ಇಬ್ಬರೂ ಸೇರಿ ಕರಣ್ ನನ್ನು ಪಕ್ಕ ಪ್ಲಾನ್ ಮಾಡಿ ಕೊಲೆ ಮಾಡಿರುವುದು ತಿಳಿದುಬಂದುಬಂದಿದೆ.

ಊಟದಲ್ಲಿ 15 ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಕರೆಂಟ್ ಶಾಕ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಕರಣ್ ಪತ್ನಿ ಹಾಗೂ ಮೈದುನನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read