ವಡೋದರಾ ಸೇತುವೆ ಕುಸಿತ ; ರಕ್ಷಣಾ ಗೋಡೆ ನಿರ್ಮಿಸಿ ತಮ್ಮದೇ ವಾಹನಗಳನ್ನು ಸಿಕ್ಕಿಹಾಕಿಸಿಕೊಂಡ ಅಧಿಕಾರಿಗಳು | Viral Video

ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ನಡೆದ ವಿಚಿತ್ರ ಘಟನೆಯೊಂದು ನಗೆಪಾಟಲಿಗೀಡು ಮಾಡಿದೆ. ಜಿಲ್ಲಾಡಳಿತವು ಪಾದ್ರಾ ಬಳಿಯ ಕುಸಿದ ಸೇತುವೆಗೆ ಪ್ರವೇಶವನ್ನು ನಿರ್ಬಂಧಿಸಲು ನಿರ್ಮಿಸಿದ ಇಟ್ಟಿಗೆ ಗೋಡೆಯ ಹಿಂದೆ ತಮ್ಮದೇ ಆದ ರಕ್ಷಣಾ ವಾಹನಗಳನ್ನು ಸಿಕ್ಕಿಹಾಕಿಸಿಕೊಂಡಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾಸ್ಯಕ್ಕೆ ಕಾರಣವಾಗಿದೆ.

ಏನಿದು ಘಟನೆ ? ವರದಿಗಳ ಪ್ರಕಾರ, ಜುಲೈ 9 ರಂದು ಸೇತುವೆ ಕುಸಿದ ನಂತರ, ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯು ಅಪಾಯಕಾರಿ ಸ್ಥಳಕ್ಕೆ ವಾಹನಗಳು ಪ್ರವೇಶಿಸುವುದನ್ನು ತಡೆಯಲು ಮೂರು ಅಡಿ ಎತ್ತರದ ಇಟ್ಟಿಗೆ ಗೋಡೆಯನ್ನು ತ್ವರಿತವಾಗಿ ನಿರ್ಮಿಸಿತ್ತು. ಆದರೆ, ಇಲ್ಲಿಯೇ ಒಂದು ದೊಡ್ಡ ಪ್ರಮಾದ ನಡೆದಿದೆ. ರಕ್ಷಣಾ ಕಾರ್ಯಕ್ಕಾಗಿ ಮೀಸಲಾದ ಒಂದು ಟೆಂಪೋ, ಒಂದು ಪಿಕ್-ಅಪ್ ವ್ಯಾನ್ ಮತ್ತು ಮತ್ತೊಂದು ವಾಹನವನ್ನು ಸೇತುವೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿರುವುದನ್ನು ಅಧಿಕಾರಿಗಳು ಮರೆತಿದ್ದರು.

ಸ್ಥಳೀಯರು ಈ ತಪ್ಪನ್ನು ಗಮನಿಸಿ, ನಿರ್ಮಾಣ ಕಾರ್ಯ ನಡೆಯುವಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದರು. ಆದರೆ, ಯಾರೂ ಗಮನಹರಿಸುವಷ್ಟರಲ್ಲಿ ಗೋಡೆ ಪೂರ್ಣಗೊಂಡಿತ್ತು ಮತ್ತು ಮೂರು ವಾಹನಗಳು ಗೋಡೆಯ ಹಿಂದೆ ಸಿಕ್ಕಿಹಾಕಿಕೊಂಡಿದ್ದವು.

ಈಗ, ಅಧಿಕಾರಿಗಳು ಮೊದಲಿನ ಸ್ಥಿತಿಗೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ. ವಾಹನಗಳನ್ನು ಹೊರತೆಗೆಯಲು ಅವರು ಗೋಡೆಯ ಒಂದು ಭಾಗವನ್ನು ಒಡೆಯಬೇಕು, ವಾಹನಗಳನ್ನು ತೆಗೆದು ನಂತರ ಗೋಡೆಯನ್ನು ಮತ್ತೆ ಹೊಸದಾಗಿ ನಿರ್ಮಿಸಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read