ಬೆಂಗಳೂರು: ಶಾಲಾ ವಾಹನದಿಂದ ಬಿದ್ದು ಎರಡನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಹುಚ್ಚಹನುಮಗೌಡನ ಪಾಳ್ಯ ಗ್ರಾಮದ ಬಳಿ ಘಟನೆ ನಡೆದಿದೆ.
7 ವರ್ಷದ ರಜತ್ ಸಾವನ್ನಪ್ಪಿದ ಬಾಲಕ ಎಂದು ಹೇಳಲಾಗಿದೆ. ಮಾಗಡಿ ತಾಲೂಕಿನ ಜನತಾ ಕಾಲೋನಿಯ ನಿವಾಸಿಯಾಗಿರುವ ಬಾಲಕ ಖಾಸಗಿ ಶಾಲಾ ವಾಹನದಿಂದ ಬಿದ್ದು ಮೃತಪಟ್ಟಿದ್ದಾನೆ. ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ದುರ್ಘಟನೆ ಸಂಭವಿಸಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.