ಅಬುಧಾಬಿ: ಶ್ರೀಲಂಕಾದ ಬೌಲರ್ ಕೆವಿನ್ ಕೊತ್ತಿಗೊಡಾ ಅವರ ವಿಶಿಷ್ಟ ಬೌಲಿಂಗ್ ಶೈಲಿಯು ಕ್ರಿಕೆಟ್ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡುವುದು ಖಚಿತ, 2021 ರ ಅಬುಧಾಬಿ ಟಿ10 ಪಂದ್ಯಾವಳಿಯಲ್ಲಿ ಅವರನ್ನು ಎದುರಿಸಿದ ಟಾಮ್ ಬ್ಯಾಂಟನ್‌ಗೆ ಆದಂತೆಯೇ ಇದೀಗ ಈ ನಾಲ್ಕು ವರ್ಷಗಳ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.
ಕ್ರಿಕೆಟ್‌ನಲ್ಲಿ ಲಸಿತ್ ಮಾಲಿಂಗಾ, ಪಾಲ್ ಆಡಮ್ಸ್, ಸೊಹೈಲ್ ತನ್ವೀರ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಅನೇಕ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯ ಬೌಲರ್‌ಗಳಿದ್ದಾರೆ. ಆ ಪಟ್ಟಿಗೆ ಈ ವಿಶಿಷ್ಟ ಬೌಲಿಂಗ್ ಶೈಲಿಯು ಮತ್ತೊಂದು ಸೇರ್ಪಡೆಯಾಗಿದೆ. ಗಾಲ್ಲೆಯ ಲೆಗ್ ಸ್ಪಿನ್ನರ್ ಕೆವಿನ್ ಕೊತ್ತಿಗೊಡಾ ಅವರ ಬೌಲಿಂಗ್ ಶೈಲಿಯು ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್ ಅವರಂತೆಯೇ ಇದ್ದು, ಅವರು ತಮ್ಮ ದೇಹವನ್ನು ತಿರುಗಿಸಿ, ತಮ್ಮ ಕೈಯ ಹಿಂಭಾಗದಿಂದ ಚೆಂಡನ್ನು ಬಿಡುಗಡೆ ಮಾಡುತ್ತಾರೆ.
ಕೆವಿನ್ ಕೊತ್ತಿಗೊಡಾ ಮರಾಠಾ ಅರೇಬಿಯನ್ಸ್ ಅನ್ನು ಪ್ರತಿನಿಧಿಸುತ್ತಿದ್ದರು ಮತ್ತು ಲಾಹೋರ್ ಕಲಂದರ್ಸ್‌ನ ಟಾಮ್ ಬ್ಯಾಂಟನ್ ವಿರುದ್ಧ ಆಡುತ್ತಿದ್ದರು. ಬ್ಯಾಂಟನ್ ಅವರ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯಿಂದ ದಿಗ್ಭ್ರಮೆಗೊಂಡಿದ್ದು ಅವರ ಪ್ರತಿಕ್ರಿಯೆ ಆಶ್ಚರ್ಯ ಮತ್ತು ಗೊಂದಲದಿಂದ ಕೂಡಿದಾಗಿತ್ತು. ಭಾರತದ ಶಿವಲ್ ಕೌಶಿಕ್ ಕೂಡ ಇದೇ ರೀತಿಯ ಬೌಲಿಂಗ್ ಶೈಲಿಯನ್ನು ಹೊಂದಿದ್ದಾರೆ.
A new way of bowling😚😚👇👇 pic.twitter.com/wTcOkaiAeA
— Omgitala (@OGitala) July 17, 2025