Viral Video: ಕುಡಿದ ಅಮಲಿನಲ್ಲಿ ನದಿ ದಡದ ಬಳಿ ಕುಣಿದ ಯುವತಿ !

ಇತ್ತೀಚೆಗೆ ಪುಣೆಯಲ್ಲಿ ಕೆಲ ವಿಚಿತ್ರ ಘಟನೆಗಳು ನಡೆದಿವೆ. ಈ ಘಟನೆಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕವಾಗಿ ವಿಚಿತ್ರವಾಗಿ ವರ್ತಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ನಡವಳಿಕೆಗಳು ಹೆಚ್ಚಾಗಿ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಕುಡಿದು ಕುಣಿದ ಮಹಿಳೆ, ನದಿಗೆ ಹಾರಲು ಯತ್ನ!

ನಾನಾ-ನಾನಿ ಪಾರ್ಕ್ ಬಳಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಯುವತಿಯೊಬ್ಬರು ಮದ್ಯಪಾನ ಮಾಡಿರುವುದಾಗಿ ಕಂಡುಬಂದಿದ್ದು, ನದಿ ದಡದಲ್ಲಿ ಕುಳಿತು ಢೋಲ್ ಬೀಟ್‌ಗಳಿಗೆ ಕುಣಿದು ಕುಪ್ಪಳಿಸಿದ್ದಾರೆ. ಅವರ ವಿಚಿತ್ರ ವರ್ತನೆ, ನದಿಗೆ ಹಾರಲು ಯತ್ನಿಸುತ್ತಿದ್ದಾರೆಂಬಂತೆ ಕಂಡುಬಂದಾಗ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ, ಜನಸಂದಣಿಯನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಯುವತಿ ನದಿದಡದಲ್ಲಿ ಕುಣಿಯುತ್ತಿರುವುದು ಮತ್ತು ಪೊಲೀಸರು ಅಲ್ಲಿರುವುದು ಕಂಡುಬಂದಿದೆ.

ವಿಗ್ ಧರಿಸಿ ಬಸ್ ತಡೆದು ಕುಣಿದ ಯುವಕ!

ಇನ್ನೊಂದು ವೈರಲ್ ವೀಡಿಯೊದಲ್ಲಿ, ಮಹಿಳೆಯ ವಿಗ್ ಧರಿಸಿದ ವ್ಯಕ್ತಿಯೊಬ್ಬರು ರಸ್ತೆಯ ಮಧ್ಯದಲ್ಲಿ PMPML ಬಸ್ ಅನ್ನು ತಡೆದು ನಿಲ್ಲಿಸಿದ್ದಾರೆ. ಬಸ್ ಹತ್ತಿರ ಬಂದರೂ ಆತ ಕದಲದೆ, ಬಸ್ ನಿಂತ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಕುಣಿಯಲು ಪ್ರಾರಂಭಿಸಿದ್ದಾರೆ. ಈ ಘಟನೆ ರಸ್ತೆಯಲ್ಲಿದ್ದವರನ್ನು ಗೊಂದಲಕ್ಕೀಡು ಮಾಡಿದೆ.

ರೀಲ್ಸ್‌ಗಾಗಿ ಬಸ್ ನಿಲ್ಲಿಸಿದ ವಿದ್ಯಾರ್ಥಿ !

ಇದಕ್ಕೂ ಮುನ್ನ, ಫರ್ಗುಸನ್ ಕಾಲೇಜು ರಸ್ತೆಯಲ್ಲಿ ವಿದ್ಯಾರ್ಥಿಯೊಬ್ಬರು PMPML ಬಸ್ ಅನ್ನು ಇನ್‌ಸ್ಟಾಗ್ರಾಮ್ ರೀಲ್ ಮಾಡಲು ನಿಲ್ಲಿಸಿದ್ದ. ವಿದ್ಯಾರ್ಥಿ ಬಸ್ ನಿಲ್ಲಿಸಲು ಸನ್ನೆ ಮಾಡಿದಾಗ, ಚಾಲಕ ಬಸ್ ಹತ್ತಲು ಬರುತ್ತಿದ್ದಾರೆಂದು ಭಾವಿಸಿ ನಿಲ್ಲಿಸಿದ್ದಾರೆ. ಆದರೆ, ವಿದ್ಯಾರ್ಥಿ ಬಸ್ ಹತ್ತದೆ, ಬಸ್‌ನ ಮೆಟ್ಟಿಲಿನ ಮೇಲೆ ಕಾಲಿಟ್ಟು ಶೂ ಲೇಸ್ ಕಟ್ಟುವಂತೆ ನಟಿಸಿ, ನಂತರ ಹಾಗೇ ನಡೆದು ಹೋಗಿದ್ದಾನೆ. ಇದರಿಂದ ಬಸ್ ಚಾಲಕ ಮತ್ತು ಕಂಡಕ್ಟರ್ ಕೋಪಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read