ಲಖನೌ: ಎರಡು ವಾರಗಳ ಹಿಂದೆ ಗ್ಯಾಂಗ್ ರೇಪ್ ಗೆ ಒಳಾಗಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದರ್ ಶಹರ್ ನಲ್ಲಿ ನಡೆದಿದೆ
ಮೂವರು ಅಪ್ರಾಪ್ತರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದರು. ಸಂತ್ರಸ್ತೆ ತಾಯಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅತ್ಯಾಚಾರವೆಸಗಿದ್ದ ಮೂವರು ಅಪ್ರಾಪ್ತರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದರು. ತೀವ್ರವಾಗಿ ಮನನೊಂದಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಾಲಕಿ ಹಾಗೂ ಆಕೆಯ ಸಹೋದರ ಮನೆಯ ವರಾಂಡದಲ್ಲಿ ಕುಳಿತಿದ್ದ ವೇಳೆ ಜೂನ್ 28ರಂದು ಮಧ್ಯಾಹ್ನ ಮನೆಗೆ ಬೈಕ್ ನಲ್ಲಿ ಬಂದಿದ್ದ ಅಪ್ರಾಪ್ತರು ಬಾಲಕಿ ಹಾಗೂ ಆಕೆ ಸಹೋದರನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಘಟನೆ ಬಳಿಕ ಸಂತ್ರಸ್ತೆ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಮೌನವಾಗಿ ಕುಳಿತಿದ್ದಳು. ಎರಡು ದಿನಗಳಾದರೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮನೆಗೂ ಬಂದಿರಲಿಲ. ಗಾಬರಿಯಾದ ಪೋಷಕರು ವಿಚಾರಿಸಿದಾಗ ಬಾಯ್ಬಿಟ್ಟಿದ್ದಾಳೆ. ಪರಿಚಿತ ಹುಡುಗರೇ ಅತ್ಯಾಚಾರವೆಸಗಿದ್ದರು. ಇದರಿಂದ ಅವಮಾನಕ್ಕೊಳಗಾದ ಬಾಲಕಿ ತೀವ್ರವಾಗಿ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಮುಖ ಆರೋಪಿ ವಿಪಿನ್ ನನ್ನು ಬಂಧಿಸಲಾಗಿದೆ.