ಬೆಂಗಳೂರು : 2025-26 ನೇ ಸಾಲಿನ ಪ್ರತಿಭಾಕಾರಂಜಿ/ಕಲೋತ್ಸವ ಕಾರ್ಯಕ್ರಮದ ವೇಳಾಪಟ್ಟಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ವಿಷಯಕ್ಕೆ ಸಂಬಂದಿಸಿದಂತೆ ಉಲ್ಲೇಖಿತದಂತೆ 2025-26ನೇ ಸಾಲಿನ ಪ್ರತಿಭಾಕಾರಂಜಿ/ಕಲೋತ್ಸವ ಕಾರ್ಯಕ್ರಮ ಆಯೋಜನೆ ಸಂಬಂದ ಸುತ್ತೋಲೆಯನ್ನು ಹೊರಡಿಸಿ ವಿವಿಧ ಹಂತದ ಕಾರ್ಯಕ್ರಮವನ್ನು ಆಯೋಜಿಸಲು ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿರುತ್ತದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಶೈಕ್ಷಣಿಕ ವರ್ಷದ ಮೊದಲನೇ ಅವಧಿಯಲ್ಲಿ ವಿವಿಧ ಹಂತದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿರುವ ಕಾರಣ, 2025-26ನೇ ಸಾಲಿನ ಪ್ರತಿಭಾಕಾರಂಜಿ/ ಕಲೋತ್ಸವ ಕಾರ್ಯಕ್ರಮ ಕಸ್ಟರ್, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಈ ಕೆಳಕಂಡ ವೇಳಾಪಟ್ಟಿಯಂತೆ ಆಯೋಜಿಸಲು ತಿಳಿಸಿದೆ. ಉಳಿದಂತೆ ಸುತ್ತೋಲೆಯಲ್ಲಿರುವ ಅಂಶಗಳಂತೆ ಕಾರ್ಯಕ್ರಮ ಆಯೋಜಿಸಲು ಕ್ರಮಕೈಗೊಳ್ಳುವಂತೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು(ಆಡಳಿತ) ರವರಿಗೆ ಸೂಚಿಸಿದೆ.

You Might Also Like
TAGGED:ಪ್ರತಿಭಾಕಾರಂಜಿ