ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಕಾಮೆಡ್ -ಕೆ ಕೂಡ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಇದರಿಂದಾಗಿ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲು ಕೌನ್ಸೆಲಿಂಗ್ ನಡೆಸಲಿದೆ. ಪ್ರಾಧಿಕಾರದ ವೇಳಾಪಟ್ಟಿಯ ಪ್ರಕಾರ ಜುಲೈ 18ರಂದು ಪ್ರಕ್ರಿಯೆ ಆರಂಭವಾಗಿ ಜುಲೈ 28 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಲಾಗುವುದು.
ಜುಲೈ 18ರಂದು ಕಾಮೆಡ್ -ಕೆ ಕೌನ್ಸೆಲಿಂಗ್ ಆರಂಭವಾಗಲಿದ್ದು, ಆಗಸ್ಟ್ 4ರಂದು ಮುಕ್ತಾಯವಾಗಲಿದೆ.
ಜುಲೈ 18ರಿಂದ ಕಾಮೆಡ್ -ಕೆ ಆಪ್ಷನ್ ಎಂಟ್ರಿ ಆರಂಭಿಸಲಾಗುವುದು. ಜುಲೈ 20ರವರೆಗೆ ವಿದ್ಯಾರ್ಥಿಗಳು ಆಯ್ಕೆ ದಾಖಲಿಸಬಹುದಾಗಿದೆ. ಜುಲೈ 28ರಂದು ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಲಾಗುವುದು. ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆದುಕೊಳ್ಳಲು ಆಗಸ್ಟ್ 4ರವರೆಗೆ ಅವಕಾಶವಿದೆ.