ಬೆಂಗಳೂರು: ಪದ್ಮಭೂಷಣ, ಹಿರಿಯ ನಟಿ ಬಿ. ಸರೋಜಾದೇವಿ(87) ನಿನ್ನೆ ನಿಧನರಾಗಿದ್ದಾರೆ. ಸರೋಜಾದೇವಿಯವರ ಹುಟ್ಟೂರು ದಶವಾರದಲ್ಲಿ ಇಂದು ಅಂತ್ಯಕ್ರಿಯೆ ನಡೆಸಲಾಗುವುದು.
ಬೆಂಗಳೂರಿನ ನಿವಾಸದಿಂದ ಇಂದು ಬೆಳಗ್ಗೆ 11 ಗಂಟೆಗೆ ಚನ್ನಪಟ್ಟಣಕ್ಕೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗುವುದು. ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದಶಾವರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಬೆಳಗ್ಗೆ 11 ಗಂಟೆಗೆ ಪಾರ್ಥಿವ ಶರೀರವನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡಲಾಗುವುದು ಮುಖ್ಯಮಂತ್ರಿಗಳು ಬಂದಮೇಲೆ ಸರ್ಕಾರಿ ಗೌರವ ನೀಡುವ ಕುರಿತು ಚರ್ಚೆ ನಡೆಯಲಿದೆ.
ದಶಾವರ ಗ್ರಾಮದ ತೋಟದಲ್ಲಿ ಇರುವ ಸರೋಜಾದೇವಿಯವರ ತಾಯಿ ರುದ್ರಮ್ಮನವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.