ಬಸ್ ಚಾಲನೆ ಮಾಡುವಾಗ ಹೃದಯಾಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದ್ದು, ಪಾದಚಾರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ ಪಾದಚಾರಿ ಮತ್ತು ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು.
ಚೆನ್ನೈ ರಸ್ತೆಯಲ್ಲಿ ಬಸ್ ನಿಯಂತ್ರಣ ತಪ್ಪಿ 65 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ವರದಿಯ ಪ್ರಕಾರ, ಭಾನುವಾರ ಈ ಘಟನೆ ನಡೆದಿದ್ದು, ಬಸ್ ಚಾಲನೆ ಮಾಡುತ್ತಿರುವಾಗ ಚಾಲಕನಿಗೆ ಹೃದಯಾಘಾತವಾಗಿದೆ.
ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ವಾಹನವು ಆ ಪ್ರದೇಶದಲ್ಲಿ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ವಿವರಗಳ ಪ್ರಕಾರ, ಚಾಲಕ ಕೊಯಂಬೇಡು ಮತ್ತು ತಾಂಬರಂ ನಡುವೆ ಚಲಿಸುವ ಮಾರ್ಗ 70C ಯಲ್ಲಿ ಮೆಟ್ರೋಪಾಲಿಟನ್ ಸಾರಿಗೆ ನಿಗಮ (MTC) ಬಸ್ ಅನ್ನು ಚಲಾಯಿಸುತ್ತಿದ್ದರು. ಭಾನುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ, ವೇದಪಳನಿ ಡಿಪೋದಿಂದ CMBT ಡಿಪೋಗೆ ಹೋಗುತ್ತಿದ್ದಾಗ, ಹೋಟೆಲ್ ದಾಟುವಾಗ ಚಾಲಕ ಸ್ಟೀರಿಂಗ್ ಮೇಲೆ ಕುಸಿದು ಬಿದ್ದರು. ಬಸ್ ನಿಯಂತ್ರಣ ತಪ್ಪಿದಾಗ, ಅದು ಮೊದಲು ಪಾದಚಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆಬದಿಯಲ್ಲಿದ್ದ ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಸ್ಥಳಕ್ಕೆ ಧಾವಿಸಿ ಚಾಲಕನನ್ನು ಹೊರಗೆಳೆಯಲು ಕಿಟಕಿ ಒಡೆದರು,. ನಂತರ ಗಂಭೀರವಾಗೊ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು…