ನವದೆಹಲಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ತನ್ನ ಅಂಗಸಂಸ್ಥೆ ಶಾಲೆಗಳನ್ನು ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ(NIOS) ಪರೀಕ್ಷೆಗಳನ್ನು ನಡೆಸುವಂತೆ ತಿಳಿಸಿದೆ. NIOS 2025 ಪರೀಕ್ಷೆಗಳು ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿವೆ.
ಅಧಿಕೃತ ಸೂಚನೆಯ ಪ್ರಕಾರ, ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ(NIOS) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಇದು ವರ್ಷಕ್ಕೆ ಎರಡು ಬಾರಿ ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್ನಲ್ಲಿ ಮಾಧ್ಯಮಿಕ(10ನೇ) ಮತ್ತು ಹಿರಿಯ ಮಾಧ್ಯಮಿಕ (12ನೇ) ಹಂತಗಳಿಗೆ ಹಾಗೂ ವೃತ್ತಿಪರ ಕೋರ್ಸ್ಗಳಿಗೆ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುತ್ತದೆ. NIOS ಅತಿದೊಡ್ಡ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಯಾಗಿದೆ.
ಪ್ರತಿ ವರ್ಷ, NIOS ತನ್ನ ಪರೀಕ್ಷೆಗಳನ್ನು ನಡೆಸಲು CBSE ಯೊಂದಿಗೆ ಸಂಯೋಜಿತವಾಗಿರುವ ಶಾಲೆಗಳ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಳ್ಳುತ್ತದೆ. NIOS ಗಾಗಿ ಮುಂದಿನ ಸಾರ್ವಜನಿಕ ಪರೀಕ್ಷೆಗಳನ್ನು ಅಕ್ಟೋಬರ್ ಮತ್ತು ನವೆಂಬರ್ 2025 ರಲ್ಲಿ ನಿಗದಿಪಡಿಸಲಾಗಿದೆ
ಇದಲ್ಲದೆ, exams.nios.ac.in ನಲ್ಲಿ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ಉಪಕ್ರಮವನ್ನು ಬೆಂಬಲಿಸುವಂತೆ ಮಂಡಳಿಯು ಶಾಲೆಗಳನ್ನು ವಿನಂತಿಸಿದೆ. ಶಾಲಾ ಮುಖ್ಯಸ್ಥರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮುಖಪುಟದಲ್ಲಿರುವ ಪರೀಕ್ಷಾ ಕೇಂದ್ರದ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನೋಂದಣಿ ಫಾರ್ಮ್ ಅನ್ನು ಪೂರ್ಣಗೊಳಿಸಬೇಕು. https://exams.nios.ac.in/ >> ಪರೀಕ್ಷಾ ಕೇಂದ್ರ >> ಈಗಲೇ ನೋಂದಾಯಿಸಿ ಎಂಬ ನೋಂದಣಿ ಲಿಂಕ್ ಮೂಲಕ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸಲು ನಿಮ್ಮ ಒಪ್ಪಿಗೆಯನ್ನು ತಿಳಿಸಲು ವಿನಂತಿಸುತ್ತೇವೆ ಎಂದು ಅಧಿಕೃತ ಸೂಚನೆಯಲ್ಲಿ ಹೇಳಲಾಗಿದೆ.