ನವದೆಹಲಿ: ಗೃಹೋಪಯೋಗಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ಗ್ರಾಹಕರಿಗೆ ಜಿಎಸ್‌ಟಿ ಮಂಡಳಿ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ಶೇಕಡ 12ರ ತೆರಿಗೆ ಸ್ಲ್ಯಾಬ್ ನಲ್ಲಿರುವ ಬೆಣ್ಣೆ, ತುಪ್ಪ, ಸಂಸ್ಕರಿಸಿದ ಆಹಾರ, ಮೊಬೈಲ್ ಫೋನ್, ಬಟ್ಟೆ, ಎಸಿ ಸೇರಿದಂತೆ ಅನೇಕ ವಸ್ತುಗಳ ತೆರಿಗೆ ಕಡಿಮೆ ಮಾಡುವ ನಿರೀಕ್ಷೆ ಇದೆ.
ಜುಲೈ 21ರ ಸಂಸತ್ ಮುಂಗಾರು ಅಧಿವೇಶನಕ್ಕೆ ಮೊದಲು ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಿಎಸ್‌ಟಿ ತೆರಿಗೆ ಸ್ಲಾಬ್‌ಗಳಲ್ಲಿ ಹೆಚ್ಚಿನ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಶೇಕಡ 12ರ ತೆರಿಗೆ ಸ್ಲ್ಯಾಬ್ ನಲ್ಲಿರುವ ಗ್ರಾಹಕ ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ಶೇಕಡ 12ರ ತೆರಿಗೆ ಸ್ಲ್ಯಾಬ್ ನಲ್ಲಿ ಬೆಣ್ಣೆ, ತುಪ್ಪ, ಸಂಸ್ಕರಿಸಿದ ಆಹಾರ, ಮೊಬೈಲ್, ಹಣ್ಣಿನ ರಸ, ಉಪ್ಪಿನಕಾಯಿ, ಚಟ್ನಿ, ಎಳನೀರು, ಜಾಮ್, ಛತ್ರಿ, ಬೈಸಿಕಲ್, ಟೂತ್ ಪೇಸ್ಟ್ ಮತ್ತು ಬಟ್ಟೆಗಳಂತಹ ಅಗತ್ಯ ವಸ್ತುಗಳಿವೆ. ಇವುಗಳಲ್ಲದೆ ಎಸಿ ತೆರಿಗೆ ಇಳಿಸುವ ಪ್ರಸ್ತಾಪವನ್ನು ಮಂಡಳಿ ಪರಿಗಣಿಸುವ ಸಾಧ್ಯತೆ ಇದೆ.
ಜೀವ ವಿಮೆ ಮತ್ತು ವೈದ್ಯಕೀಯ ವಿಮೆ ಕಂತುಗಳ ಮೇಲೆ ಈಗ ವಿಧಿಸುತ್ತಿರುವ ಶೇಕಡ 18ರಷ್ಟು ತೆರಿಗೆಯನ್ನು ರದ್ದುಗೊಳಿಸಲು ಕೆಲವು ಸಚಿವರು ಪ್ರಸ್ತಾಪಿಸಿದ್ದು, ಈ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.