ಹೊಸಪೇಟೆ(ವಿಜಯನಗರ ಜಿಲ್ಲೆ): ಪ್ರೇಯಸಿ ಮನೆಯವರ ಕೊಲೆ ಬೆದರಿಕೆಗೆ ಹೆದರಿದ ಪ್ರೇಮಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಉದ್ಗಟ್ಟಿ ದೊಡ್ಡ ತಾಂಡಾದಲ್ಲಿ ನಡೆದಿದೆ.
ಪ್ರೇಯಸಿ ಸೇರಿದಂತೆ ನಾಲ್ವರ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಪೂಜಿನಗರ ದೊಡ್ಡ ತಾಂಡಾ ನಿವಾಸಿ ಪಿ.ಟಿ. ಶಶಿಕುಮಾರ್(26) ಆತ್ಮಹತ್ಯೆ ಮಾಡಿಕೊಂಡ ಯುವಕ. ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಶಶಿಕುಮಾರ್ ಮದುವೆಯಾಗಲು ನಿರ್ಧರಿಸಿದ್ದ. ಈ ವಿಚಾರ ಯುವತಿ ಮನೆಯವರಿಗೆ ಗೊತ್ತಾಗಿ ನಿನಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಜೀವ ಭಯದಲ್ಲಿ ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಸಹೋದರ ದೂರು ನೀಡಿದ್ದಾರೆ.