ಶಿವಮೊಗ್ಗ: ಮುಂದಿನ ವರ್ಷ ಮೋದಿಯವರಿಗೆ 75 ವರ್ಷವಾಗಲಿದೆ. ಅವರು ಪ್ರಧಾನಿ ಸ್ಥಾನದಿಂದ ಇಳಿಯಲಿ ಎಂದೇ 75 ವರ್ಷದ ಬಳಿಕ ಅಧಿಕಾರದಲ್ಲಿರಬಾರದು ಎಂಬ ಮೋಹನ್ ಭಾಗವತ್ ಹೇಳಿಕೆ ನೀಡಿರುವಂತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋಹನ್ ಭಾಗವತ್ ಅವರು ಸರಿಯಾಗಿಯೇ ಹೇಳಿದ್ದಾರೆ. ಮುಂದಿನ ವರ್ಷ ಮೋದಿಯವರಿಗೆ 75 ವರ್ಷವಾಗಲಿದೆ. ಅವರು ಪ್ರಧಾನಿ ಸ್ಥಾನದಿಂದ ಇಳಿಯಲಿ ಎಂದೇ ಸೂಚನೆ ನೀಡಿದ್ದಾರೆ ಅನಿಸುತ್ತೆ. 75 ವರ್ಷ ಆದ ಮೇಲೆ ಅಧಿಕಾರದಲ್ಲಿಬಾರದೆಂದು ಭಾಗವತ್ ಅವರು ಹೇಳಿದ್ದಾರೆ. ನರೇಂದ್ರ ಮೋದಿ ಅಧಿಕಾರದಿಂದ ಇಳಿಯಲಿ ಎಂದೇ ಸೂಚನೆ ಇದಾಗಿದೆ ಎಂದರು.
ಮೋದಿ ಅವರು ಅಧಿಕಾರದಿಂದ ಕೆಳಗಿಳಿಯಬೇಕು. ನಿತಿನ್ ಗಡ್ಕರಿ ಅವರಿಗೆ ಪ್ರಧಾನಿ ಹುದ್ದೆ ನೀಡಬೇಕು. ಪ್ರಧಾನಿ ಹುದ್ದೆಗೆ ನಿತಿನ್ ಗಡ್ಕರಿ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಇತ್ತೀಗಷ್ಟೇ ಅವರು ಭಾಷಣದಲ್ಲಿ ಬಡವರು, ಬಡವರಾಗಿಯೇ ಇದ್ದಾರೆಂದು ಹೇಳಿದ್ದರು. ಭಾರತ ಈಗಲೂ ಬಡವರ ರಾಷ್ಟ್ರವಾಗಿದೆ ಎಂದು ಹೇಳಿದ್ದರು. ಇದ್ದಿದ್ದನ್ನು ಇದ್ದಹಾಗೆ ನೇರವಾಗಿ ಮಾತನಾಡುವ ವ್ಯಕ್ತಿ ಗಡ್ಕರಿಯಾಗಿದ್ದಾರೆ. ಹೀಗಾಗಿ ಅವರು ಪ್ರಧಾನಿಯಾದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ. 75 ವರ್ಷವಾದ ಬಳಿಕ ನರೇಂದ್ರ ಮೋದಿಯವರಿಗೆ ಕೆಳಗಿಳಿಸಲೇಬೇಕು ಎಂದರು.
ಸಿಗಂಧೂರು ಸೇತುವೆ ಆ ಭಾಗದ ಜನರಿಗೆ ಬಹಳ ಸದುಪಯೋಗವಾಗಲಿದೆ. ಆದರೆ ಬಿಜೆಪಿಯವರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ಮಾಡುತ್ತಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಈವರೆಗೂ ಆಹ್ವಾನ ಪತ್ರಿಕೆ ಕೊಟ್ಟಿಲ್ಲ. ದಿನ ಸಂಸದ ರಾಘವೇಂದ್ರ ಬರ್ತಾರೆ, ಪೆಂಡಾಲ್ ಹಾಗೂ ಸೇತುವೆ ನೋಡಿಕೊಂಡು ಹೋಗ್ತಾರೆ. ಆದರೂ ನನಗೆ ಆಹ್ವಾನ ಪತ್ರಿಕೆ ನೀಡಿಲ್ಲ. ಆದರೆ ಮುಂದಿನ ಪ್ರಧಾನಿ ನಿತಿನ್ ಗಡ್ಕರಿ, ಯಡಿಯೂರಪ್ಪ ಬರೋದರಿಂದ ನಾವೇನು ರಾಜಕಾರಣ ಮಾಡಲ್ಲ. ನಾನು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗ್ತೆನೆ. ಮನೆ ಮನೆಗೆ ಹೋಗಿ ಸೇತುವೆ ಕಾರ್ಯಕ್ರಮಕ್ಕೆ ಬಿಜೆಪಿಯವರು ಕರೆಯುತ್ತಿದ್ದಾರೆ. ಮನೆ, ಮನೆ ಸೇತುವೆ ಕಾರ್ಯಕ್ರಮ ಎಂದು ಕರೆಯುತ್ತಿದ್ದಾರಂತೆ ಎಂದರು.
ಇದು ಕೇಂದ್ರ ಸರ್ಕಾರದ ಯೋಜನೆಯ ಕಾಮಗಾರಿ ಸೇತುವೆ ನಿಜ. ನಾವು ಇದನ್ನ ಯಾವಾಗಲೂ ಹೇಳುತ್ತಾ ಬಂದಿದ್ದೆವೆ. ಸೇತುವೆ ಉದ್ಘಾಟನೆ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರಿಗೂ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಹೇಳಲಾಗುತ್ತಿದೆ. ನಾವು ಕೂಡ ಹಸಿರುಮಕ್ಕಿ ಸೇತುವೆ ಉದ್ಘಾಟನೆಗೆ ಸಿಎಂ, ಡಿಸಿಎಂ ಅವರನ್ನೂ ಕರೆಸಿ ಜರಕಾರಣ ಮಾಡುತ್ತೇವೆ. ಸೇತುವೆ ನಾಮಕರಣ ವಿಚಾರದಲ್ಲಿ ಸೇತುವೆಗೆ ದೇವಿ ಹೆಸರೇ ಇಡಬೇಕು. ಬೇರೆ ಹೆಸರು ಹಾಕುವ ಪ್ರಯತ್ನ ಮಾಡಿದ್ರೆ ಅಲ್ಲಿ ಬೋರ್ಡ್ ಹಾಕೋದಕ್ಕೆ ಬಿಡೋಲ್ಲ. ಯಡಿಯೂರಪ್ಪ ದೇವಸ್ಥಾನದಲ್ಲೇ ಹೇಳಿದ್ದಾರೆ ಹಾಗಾಗಿ ದೇವಿ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಶರಾವತಿ ಹಿನ್ನೀರಿನಲ್ಲಿ ಹಾಲಪ್ಪ ಕಡೆಯವರು ಯಾರೂ ಮುಳುಗಿಲ್ಲ. ಹಾಲಪ್ಪ ಬರೀ ಬೊಗಳೆ ಬಿಡುತ್ತಾನೆ. ಅವನ ಕುಟುಂಬದವರು ಯಾರು ಅಲ್ಲಿ ಮುಳುಗಡೆ ಆಗಿಲ್ಲ. ನಾನು ಎಂ.ಎಲ್.ಎ. ಇದ್ದಾಗಲೇ ಯಡಿಯೂರಪ್ಪ ಸಿಎಂ ಆಗಿದ್ದಾಗ ನನ್ನ ಲೆಟರ್ ಮೇಲೇನೆ 100 ಕೋಟಿ ರೂ. ಅನುದಾನ ಕೊಟ್ಟಿದ್ದರು. ಪಾಪಿ ಹಾಲಪ್ಪ ಹಾಗೂ ಇದೆ ರಾಘವೇಂದ್ರ ಸಿಗಂದೂರು ಸೇತುವೆ ಆಗಬೇಕು ಅಂತ ಹಸಿರುಮಕ್ಕಿ ಸೇತುವೆ ಕಾಮಗಾರಿ ನಿಲ್ಲಿಸಿದ್ದರು ಎಂದರು.
ಸೇತುವೆ ಮಾಡೋದು ಯಡಿಯೂರಪ್ಪ ಅವರ ಕಲ್ಪನೆ ಆಗಿತ್ತು. ಸೇತುವೆ ಆಗಿರುವುದು ಅಲ್ಲಿನ ಸ್ಥಳಿಯ ಜನರಿಗೆ ಬಹಳ ಒಳ್ಳೇದಾಗಿದೆ. ಈ ಹಿಂದೆ ಅಲ್ಲಿನ ಜನಗಳಿಗೆ ಓಡಾಡಲು ತುಂಬಾ ತೊಂದರೆ ಇತ್ತು. ಸೇತುವೆ ನಿರ್ಮಾಣದಿಂದ ಈಗ ಬಹಳ ಅನುಕೂಲವಾಗಿದೆ ಎಂದರು.