ಚಾಮರಾಜನಗರ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಸ್ ಚಾಲನೆ ಮಾಡುತ್ತಿದ್ದಾಗಲೇ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಆರ್ ಪಿಕೆ ಎಂಬ ಖಾಸಗಿ ಬಸ್ ಚಾಲಕ ಗುರುಸಿದ್ದು (55) ಮೃತ ದುರ್ದೈವಿ. ಬಸ್ ಕೊಳ್ಳೇಗಾಲದಿಂದ ಚಾಅಮರಾಜನಗರಕ್ಕೆ ತೆರಳುತ್ತಿತ್ತು. ಬಸ್ ಓಡಿಸುತ್ತಿದ್ದಾಗಲೇ ಚಾಅಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಮಾರ್ಗಮಧ್ಯೆಯೇ ಗುರುಸಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಿಲ್ಲೆ ಜಿಲ್ಲೆಗಳಲ್ಲಿಯೂ ಹೃದಯಾಘಾತ ಹಲವರನ್ನು ಬಲಿಪಡೆಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.