ಮಧ್ಯ ಮ್ಯಾನ್ಮಾರ್ನಲ್ಲಿರುವ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 23 ನಾಗರಿಕರು ಸಾವನ್ನಪ್ಪಿದ್ದಾರೆ.
ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ವಾಯುವ್ಯಕ್ಕೆ 35 ಕಿಲೋಮೀಟರ್ ದೂರದಲ್ಲಿರುವ ಪ್ರತಿರೋಧದ ಭದ್ರಕೋಟೆಯಾದ ಸಾಗೈಂಗ್ ಪಟ್ಟಣದ ಲಿನ್ ಟಾ ಲು ಗ್ರಾಮದಲ್ಲಿ ಗುರುವಾರ ಈ ಮಾರಕ ದಾಳಿ ನಡೆದಿದೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳಿಂದ 150 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದ ಮಠವನ್ನು ಗುರಿಯಾಗಿಸಿಕೊಂಡು ಮುಂಜಾನೆ 1 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ. “ನಾಲ್ಕು ಮಕ್ಕಳು ಸೇರಿದಂತೆ ಇಪ್ಪತ್ತಮೂರು ನಾಗರಿಕರು ಸಾವನ್ನಪ್ಪಿದ್ದು,. ಸುಮಾರು 30 ಇತರರು ಗಾಯಗೊಂಡರು. ಅವರಲ್ಲಿ ಹತ್ತು ಜನರ ಸ್ಥಿತಿ ಗಂಭೀರವಾಗಿದೆ” ಎಂದು ಮೂಲಗಳು ತಿಳಿಸಿದೆ.
You Might Also Like
TAGGED:ಮ್ಯಾನ್ಮಾರ್