ಬೆಂಗಳೂರು : ಒಕ್ಕಲಿಗರ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ 2024-25ನೇ ಸಾಲಿನಲ್ಲಿ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಎಸ್.ಎಸ್.ಎಲ್.ಸಿ/ಪಿ.ಯು.ಸಿಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕಗಳಿಸಿರುವವರು ಹಾಗೂ ಸರ್ಕಾರೇತರ ಶಾಲೆ/ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಎಸ್.ಎಸ್.ಎಲ್.ಸಿ/ಪಿ.ಯು.ಸಿಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕಗಳಿಸಿರುವವರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಸ್ವ-ವಿವರ(ಹೆಸರು, ತಂದೆ/ತಾಯಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾಭ್ಯಾಸ ಮಾಡಿದ ಶಾಲೆ/ಕಾಲೇಜಿನ ಹೆಸರು, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಂಕಪಟ್ಟಿಯ ದೃಡೀಕೃತ ನಕಲು ಪ್ರತಿಗಳು ಮತ್ತು ಒಕ್ಕಲಿಗ ಜನಾಂಗಕ್ಕೆ ಸೇರಿದ್ದಾರೆ ಎಂಬುದಕ್ಕೆ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ/ಸಂಘದ ಗುರುತಿನ ಚೀಟಿಯ ದೃಡೀಕೃತ ನಕಲು ಪ್ರತಿ ಹಾಗೂ ಬ್ಯಾಂಕ್ ಖಾತೆಯ ವಿವರ) ಗಳನ್ನೊಳಗೊಂಡ ಅರ್ಜಿಯನ್ನು ಭರ್ತಿ ಮಾಡಿ ಪ್ರತಿಭಾ ಪುರಸ್ಕಾರ ವಿಭಾಗ, ನಾಡಪ್ರಭು ಕೆಂಪೇಗೌಡ ಭವನ, ರಾಜ್ಯ ಒಕ್ಕಲಿಗರ ಸಂಘ, ಕೆ.ಆರ್.ರಸ್ತೆ, 2.Dzid, forklach-04 ಒಳಗಾಗಿ ಸಲ್ಲಿಸಿ, ಸ್ವೀಕೃತಿ ಪಡೆದುಕೊಳ್ಳತಕ್ಕದ್ದು.ಕೊನೆಯ ದಿನಾಂಕವನ್ನು ನಿಗದಿಗೊಳಿಸಿರುವುದರಿಂದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣವಾದ ಮಾಹಿತಿ ನೀಡಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಪ್ರತಿಭಾ ಪುರಸ್ಕಾರದ ಅರ್ಜಿಗಳನ್ನು ಸಂಘದ ಕೇಂದ್ರ ಕಛೇರಿಯ ಪ್ರತಿಭಾ ಪುರಸ್ಕಾರ ವಿಭಾಗದಲ್ಲಿ ಪಡೆದುಕೊಳ್ಳಬಹುದು ಹಾಗೂ ರಾಜ್ಯ ಒಕ್ಕಲಿಗರ ಸಂಘದ ವೆಬ್ ಸೈಟ್ rvsangha.org ನಲ್ಲಿಯೂ ಪಡೆಯಬಹುದು.
ಪ್ರತಿಭಾ ಪುರಸ್ಕಾರದ ಅರ್ಜಿಗಳನ್ನು ಪರಮಾರ್ಶಿಸಿ ಅರ್ಹ ಅಭ್ಯರ್ಥಿಗಳನ್ನು ರಾಜ್ಯ ಒಕ್ಕಲಿಗರ ಸಂಗ ವೆಬ್ ಸೈಟ್ rvsangha.orgನಲ್ಲಿ ಪ್ರಕಟಿಸಲಾಗುವುದು. ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದ ದಿನಾಂಕ ಹಾಗೂ ಸ್ಥಳವನ್ನು ಮುಂದಿನ ದಿನಗಳಂದು ತಿಳಿಸಲಾಗುವುದು.
ಈ ಬಾರಿ ಒಕ್ಕಲಿಗ ಜನಾಂಗದ ಕಡುಬಡ ಕುಟುಂಬದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಉತ್ತೇಜನಕ್ಕಾಗಿ ಅನುವು ಮಾಡಿಕೊಟ್ಟಿರುವುದು ವಿಶೇಷವಾಗಿರುತ್ತದೆ. ಒಕ್ಕಲಿಗ ಜನಾಂಗದ ಅಭಿವೃದ್ಧಿಯೇ ನಮ್ಮ ಆಡು ಮಂಡಳಿಯ ದ್ವೇಯೋದ್ದೇಶವಾಗಿರುತ್ತದೆ. ರಾಜ್ಯ ಒಕ್ಕಲಿಗರ ಸಂಘದ ಹೆಸರನ್ನು ಇಮ್ಮಡಿಗೊಳಿಸುವುದು ನಮ್ಮೆ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.