ಭಟ್ಕಳ : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಭಟ್ಕಳ ಪಟ್ಟಣ ಸ್ಪೋಟಿಸುವುದಾಗಿ ಇ –ಮೇಲ್ ಬಂದಿದ್ದು, ಭಟ್ಕಳ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತೀವ್ರ ಶೋಧ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆ 10: 30 ಕ್ಕೆ ಭಟ್ಕಳ ಶಹರ ಪೊಲೀಸ್ ಠಾಣೆಗೆ ಇ-ಮೇಲ್ ಸಂದೇಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಾಂಬ್ ಇಟ್ಟು ಭಟ್ಕಳ ಪಟ್ಟಣ ಸ್ಪೋಟಿಸುವುದಾಗಿ ಇಮೇಲ್ ಬೆದರಿಕೆಯೊಡ್ಡಲಾಗಿದೆ . .kannnannandik@gmail.com ಇಮೇಲ್ ಐಡಿಯಿಂದ ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಇ-ಮೇಲ್ ಬಂದಿದೆ.
ಕೂಡಲೇ ಅಲರ್ಟ್ ಆದ ಪೊಲೀಸರು ಕೇಸ್ ದಾಖಲಿಸಿಕೊಂಡು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿಕೊಂಡು ನಗರದ ಪ್ರಮುಖ ಸ್ಥಳವನ್ನು ಪರಿಶೀಲನೆ ಮಾಡಿಸುತ್ತಿದ್ದಾರೆ. ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
You Might Also Like
TAGGED:ಭಟ್ಕಳ