ಮೈಸೂರು: ಐದು ವರ್ಷವೂ ನಾನೇ ಸಿಎಂ, ಯಾವುದೇ ಪರವರ್ ಶೇರಿಂಗ್ ಇಲ್ಲ ಎಂದಿರುವ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರ‍್ಹ ಸಚಿವ ಪರಮೇಶ್ವರ್, ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ವಿಚಹರ ನನಗೆ ಗೊತ್ತಿಲ್ಲ. ಏನು ಒಪ್ಪಂದ ಆಗಿದೆಯೋ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ವಿಷಯ ನಮ್ಮವರೆಗೆ ಬಂದೇ ಇಲ್ಲ. ಎಲ್ಲಾ ಅವರವರೇ ಚರ್ಚೆ ಮಾಡಿ ನಿರ್ಧಾರ ಮಾಡಿದ್ದಾರೆ. ನಮ್ಮ ಗಮನಕ್ಕೆ ತಂದು ಮಾತನಾಡಿದ್ರೆ ಗೊಂದಲ ಆಗುತ್ತಿರಲಿಲ್ಲ. ಹೀಗಾಗಿ ಗೊಂದಲಗಳು ಸೃಷ್ಟಿಯಾಗಿವೆ. ಹೈಕಮಾಂಡ್ ನಾಯಕರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನವೇ ಅಂತಿಮ ಎಂದು ಹೇಳಿದರು.