ಶ್ರೀನಗರ: ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ 6,400ಕ್ಕೂ ಹೆಚ್ಚು ಯಾತ್ರಿಕರನ್ನೊಳಗೊಂಡ 10ನೇ ತಂಡದ ಯಾತ್ರೆ ಆರಂಭವಾಗಿದೆ.
ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್ ನಿಂದ ಬೆಂಗಾವಲು ಪಡೆಗಳೊಂದಿಗೆ ಯಾತ್ರೆ ಆರಂಭಿಸಿದ್ದು, ಬಿಗಿ ಭದ್ರತೆಯಲ್ಲಿ ಅಮರನಾಥ ಯಾತ್ರೆ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜುಲೈ 3ರಂದು ಆರಂಭವಾಗಿರುವ ಅಮರನಾಥ ಯಾತ್ರೆಯಲ್ಲಿ ಈಗಾಗಲೇ 1.30 ಲಕ್ಷಕ್ಕೂ ಅಧಿಕ ಯಾತ್ರಿಕರು ಅಮರನಾಥನ ದರ್ಶನ ಪಡೆದಿದ್ದಾರೆ. ಸಿಆರ್ ಪಿಎಫ್, ಪೊಲೀಸ್ ಸಿಬ್ಬಂದಿಯ ಬೆಂಗಾವಲಿನೊಂದಿಗೆ 4,838 ಪುರುಷರು ಹಾಗೂ 1,387 ಮಹಿಳೆಯರು ಹಾಗೂ 16 ಮಕ್ಕಳು ಮತ್ತು 241 ಸನ್ಯಾಸಿಗಳು ಸೇರಿದಂತೆ 6,482 ಯತರಿಕರ ಹತ್ತನೇ ತಂಡ ಇಂದು ಮ್ಮುಂಜಾನೆ 3:20ರಿಂದ 4:4ರ ನಡುವೆ 268 ವಾಹನಗಳಲ್ಲಿ ಭಗವತಿ ನಗರದ ಬೇಸ್ ಮೆಂಟ್ ನಿಂದ ಅಮರನಾಥಕ್ಕೆ ಹೊರಟಿದೆ ಎಂದು ತಿಳಿಸಿದ್ದಾರೆ.
You Might Also Like
TAGGED:ಅಮರನಾಥ ಯಾತ್ರೆ