BIG NEWS : ರೈಲ್ವೇ ಹಳಿಗಳ ಮೇಲೆ ಮರಿಗೆ ಜನ್ಮ ನೀಡಿದ ಕಾಡಾನೆ : 2 ಗಂಟೆ ರೈಲು ಸಂಚಾರ ನಿಲ್ಲಿಸಿ ಮಾನವೀಯತೆ ಮೆರೆದ ಸಿಬ್ಬಂದಿ |WATCH VIDEO

ರೈಲ್ವೇ ಹಳಿಗಳ ಮೇಲೆ ಆನೆಯೊಂದು ಮರಿಗೆ ಜನ್ಮ ನೀಡಿದ್ದು, 2 ಗಂಟೆ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಜಾರ್ಖಂಡ್ ನಲ್ಲಿದೆ. ಕಾಡು ಆನೆಯೊಂದು ರೈಲ್ವೆ ಹಳಿಗಳ ಮೇಲೆ ತನ್ನ ಮರಿಗೆ ಜನ್ಮ ನೀಡಿದ್ದು, ರೈಲು ಸಂಚಾರ ಕೆಲಹೊತ್ತು ಸ್ಥಗಿತವಾಗಿತ್ತು. ಆನೆ ಮತ್ತು ಅದರ ನವಜಾತ ಮರಿ ಹೆರಿಗೆಯ ನಂತರ ಸುರಕ್ಷಿತವಾಗಿ ನಡೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಮಾನವ-ಪ್ರಾಣಿಗಳ ಸಾಮರಸ್ಯದ ಅಸ್ತಿತ್ವದ ಈ ಉದಾಹರಣೆಯನ್ನು ಹಂಚಿಕೊಳ್ಳಲು ಸಂತೋಷವಾಗಿದೆ” ಎಂದು ಯಾದವ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ, ಜೊತೆಗೆ ಆ ಕ್ಷಣದ ಎರಡು ವೀಡಿಯೊಗಳನ್ನು ಸಹ ಪೋಸ್ಟ್ ಮಾಡಲಾಗಿದೆ.

ಈ ಬಗ್ಗೆ ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ನಿತೀಶ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಜೂನ್ 25 ರಂದು 3 ಗಂಟೆ ಸುಮಾರಿಗೆ ಗರ್ಭಿಣಿ ಹೆಣ್ಣು ಆನೆ ಹೆರಿಗೆ ನೋವಿನಿಂದ ಹಳಿಗಳ ಮೇಲೆ ಮಲಗಿದೆ ಎನ್ನುವ ಸುದ್ದಿ ಬಂದಿತು. ಈ ಆನೆ ರೈಲಿಗೆ ಸಿಲುಕುವ ಸಾಧ್ಯೆತೆಯಿದೆ. ಹೀಗಾಗಿ ದಯವಿಟ್ಟು ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸುವಂತೆ ಕೇಳಿಕೊಂಡರು. ಈ ಮಾಹಿತಿ ಬಂದ ತಕ್ಷಣವೇ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ಬರ್ಕಕಾನಾದಲ್ಲಿ ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಆ ಕೂಡಲೇ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read