ವಿಶ್ವದ ಅತಿ ಉದ್ದದ ವಿಷಕಾರಿ ಹಾವು ಎಂದು ಹೆಸರುವಾಸಿಯಾದ ಕಾಳಿಂಗ ಸರ್ಪದಿಂದ (King Cobra) ದೂರವಿರುವುದು ಯಾವಾಗಲೂ ಉತ್ತಮ. ಆದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಓರ್ವ ಭಾರತೀಯ ವ್ಯಕ್ತಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ, ತನ್ನ ಬರಿಗೈಯಲ್ಲಿ ಬೃಹತ್ ಕಾಳಿಂಗ ಸರ್ಪವನ್ನು ಭಯವಿಲ್ಲದೆ ಹಿಡಿದಿರುವುದು ಕಂಡುಬಂದಿದೆ.
ಅರಣ್ಯಾಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಸ್ವಾನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ವಿಡಿಯೋವನ್ನು ಹಂಚಿಕೊಂಡು, “ನೀವು ಕಾಳಿಂಗ ಸರ್ಪದ ನಿಜವಾದ ಗಾತ್ರದ ಬಗ್ಗೆ ಎಂದಾದರೂ ಆಶ್ಚರ್ಯಪಟ್ಟಿದ್ದರೆ, ಈ ವಿಡಿಯೋ ನೋಡಿ. ಇದು ಭಾರತದಲ್ಲಿ ಎಲ್ಲಿ ಕಂಡುಬರುತ್ತದೆ ಎಂದು ನಿಮಗೆ ಗೊತ್ತಾ? ಮತ್ತು ಇಂತಹ ಹಾವು ಕಂಡಾಗ ಏನು ಮಾಡಬೇಕು?!” ಎಂದು ಬರೆದಿದ್ದಾರೆ. ವೈರಲ್ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ವಸತಿ ಪ್ರದೇಶದ ಹೊರಗೆ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದಿರುವುದು ಕಾಣಿಸುತ್ತದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋವನ್ನು @AMAZlNGNATURE ಕೂಡ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಆಘಾತಕಾರಿ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು, “ಖಂಡಿತವಾಗಿಯೂ ಭಯಾನಕ!” ಎಂದು ಉಲ್ಲೇಖಿಸಿದ್ದಾರೆ.
If you ever wondered about the real size of King cobra. Do you know where it is found in India. And what to do when you see one !! pic.twitter.com/UBSaeP1cgO
— Parveen Kaswan, IFS (@ParveenKaswan) July 8, 2025
This is the KING COBRA: the largest venomous snake in the world. pic.twitter.com/AJaUggTwsp
— Nature is Amazing ☘️ (@AMAZlNGNATURE) June 14, 2025
Why is he holding it? 😱😱
— LynneP (@LynneBP_294) June 15, 2025