ಸಿವಿಲ್ ಇಂಜಿನಿಯರಿಂಗ್ ಸೇರಿ ಬೇಡಿಕೆ ಇಲ್ಲದ ವೃತ್ತಿಪರ ಕೋರ್ಸ್ ಶುಲ್ಕ ಶೇ. 50ರಷ್ಟು ಕಡಿತ: ಬೇಡಿಕೆಯ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ

ಬೆಂಗಳೂರು: ಸಿವಿಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೇರಿದಂತೆ ಕೆಲವು ಕೋರ್ಸ್ ಗಳ ಶುಲ್ಕವನ್ನು 2025- 26 ನೇ ಸಾಲಿನಿಂದ ಅನ್ವಯವಾಗುವಂತೆ ಶೇಕಡ 50ರಷ್ಟು ಕಡಿತಗೊಳಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅದೇ ರೀತಿ ಬೇಡಿಕೆ ಇರುವ ಕೋರ್ಸುಗಳ ಶುಲ್ಕವನ್ನು ಶೇಕಡ 7.5 ರಷ್ಟು ಹೆಚ್ಚಳ ಮಾಡಲಾಗಿದೆ. ಬೇಡಿಕೆ ಕುಸಿದು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಜವಳಿ ತಂತ್ರಜ್ಞಾನ, ರೇಷ್ಮೆ ತಂತ್ರಜ್ಞಾನ ಮತ್ತು ಆಟೋಮೊಬೈಲ್ ಕೋರ್ಸ್ ಗಳಿಗೆ ಶುಲ್ಕ ಕಡಿತಗೊಳಿಸಲಾಗಿದೆ.

ಶುಲ್ಕ ವಿನಾಯಿತಿ ಸೌಲಭ್ಯ ಪಡೆಯುವ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಕೆಇಎ ಗೆ ಮನವಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಳೆದ ವರ್ಷ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5723 ಸೀಟುಗಳಿದ್ದವು. ಅವುಗಳಲ್ಲಿ 2883 ಸೀಟು ಹಂಚಿಕೆಯಾಗಿದ್ದವು. ಮೆಕ್ಯಾನಿಕಲ್ ವಿಭಾಗದಲ್ಲಿ 5977 ಸೀಟುಗಳಿದ್ದು, 2783 ಸೀಟು ಗಳು ಹಂಚಿಕೆಯಾಗಿದ್ದವು. ಹೀಗಾಗಿ ಬೇಡಿಕೆ ಇಲ್ಲದ ಕೋರ್ಸುಗಳ ಶುಲ್ಕವನ್ನು ಶೇಕಡ 50ರಷ್ಟು ಕಡಿತಗೊಳಿಸಲಾಗಿದೆ.

ವಾಸ್ತು ಶಿಲ್ಪ ಸೇರಿದಂತೆ ಕೆಲವು ಕೋರ್ಸ್ ಗಳ ಶುಲ್ಕವನ್ನು ಖಾಸಗಿ ಕಾಲೇಜುಗಳಿಗೆ ಶೇಕಡ 7.5 ರಷ್ಟು, ಸರ್ಕಾರಿ ಕಾಲೇಜುಗಳಿಗೆ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದೆ. ಈ ಶುಲ್ಕವು ವಿಶ್ವವಿದ್ಯಾಲಯ ನೋಂದಣಿ ಮತ್ತು ಇತರೆ ಸಂಸ್ಕರಣಾ ಶುಲ್ಕಗಳನ್ನು ಹೊರತುಪಡಿಸಿದೆ. ಸೂಪರ್ ನ್ಯೂಮರರಿ ಕೋಟಾದಡಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಮೊದಲ ವರ್ಷ 20 ಸಾವಿರ ರೂ. ಶುಲ್ಕ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read