ಮೈಸೂರು: ಮೈಸೂರಿನಲ್ಲಿ ಹಠಾತ್ ಹೃದಯಾಘಾತಕ್ಕೆ ಯುವಕ ಸಾವನ್ನಪ್ಪಿದ ಘಟನೆ ಚಾಮರಾಜ ಮೊಹಲ್ಲಾದಲ್ಲಿ ನಡೆದಿದೆ.
ದರ್ಶನ್ ಚೌದರಿ(28) ಮೃತಪಟ್ಟ ಯುವಕ. ದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಇಟ್ಟುಕೊಂಡಿದ್ದ ದರ್ಶನ್ ಗೆ ನಿನ್ನೆ ರಾತ್ರಿ ದಿಢೀರ್ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪೋಷಕರು ದರ್ಶನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ದರ್ಶನ್ ಕೊನೆಯುಸಿರೆಳೆದಿದ್ದಾರೆ.