ಶಿವಮೊಗ್ಗ: ಬೈಕ್ ನಲ್ಲಿ ತೆರಳುತ್ತಿದ್ದ ಮುಸ್ಲಿಂ ಯುವತಿ, ಹಿಂದೂ ಯುವಕನನ್ನು ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಘಟನೆ ನಡೆದಿದ್ದು, ಸಾಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಬ್ಬೀರ್(65), ಅರ್ಬಾಜ್(24), ಅಫ್ರೋಜ್(25) ಬಂಧಿತ ಆರೋಪಿಗಳಾಗಿದ್ದಾರೆ. ಸೊರಬದ ಕಾನುಕೇರಿ ಬಡಾವಣೆಯ 19 ವರ್ಷದ ಮುಸ್ಲಿಂ ಯುವತಿ ಹಿಂದೂ ಯುವಕನೊಂದಿಗೆ ಜುಲೈ 7ರಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಿಂದೂ ಯುವಕನೊಂದಿಗೆ ಹೋಗುತ್ತೀಯ ಎಂದು ಆಕೆಯ ಕೈ ಬೆರಳು ಹಿಡಿದು ತಿರುವಿ ಹಲ್ಲೆ ಮಾಡಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಸಾಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.