BREAKING : ಮಾಜಿ ಪ್ರಧಾನಿ ‘ಮನಮೋಹನ್ ಸಿಂಗ್’ ಕುರಿತಾದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ನಟ ಪ್ರಕಾಶ್ ಬೆಳವಾಡಿ.!

ಬೆಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತಾದ ಹೇಳಿಕೆಗೆ ನಟ ಪ್ರಕಾಶ್ ಬೆಳವಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಸದ ಬಿ.ಕೆ ಹರಿಪ್ರಸಾದ್ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ತಾವು ಆಡಿರುವ ಮಾತುಗಳನ್ನು ಹಿಂದಕ್ಕೆ ಪಡೆದು,ಆಗಿರುವ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುತ್ತೇನೆ.

ಸಾಮಾನ್ಯವಾಗಿ ವಾಟ್ಸಪ್ ಯುನಿವರ್ಸಿಟಿಯ ಬಿಜೆಪಿಯ ಮಬ್ಭಕ್ತರು ಮಾಡುವ ಟ್ರೋಲ್ ಗಳಿಗೆ ಗಮನ ಹರಿಸುವುದಿಲ್ಲ. ಆದರೆ ಪ್ರಕಾಶ್ ಬೆಳವಾಡಿ ಸಾಮಾಜಿಕ ಕಾರ್ಯಕರ್ತರಾಗಿ, ನಟರೂ ಆಗಿರುವವರು ಸಾರ್ವಜನಿಕವಾಗಿ ಸುಳ್ಳನ್ನು ಹರಡಿಸುವುದನ್ನ ನಿರೀಕ್ಷಿಸಿರಲಿಲ್ಲ.

ತಮ್ಮ ಅಪಾರ ಜ್ಞಾನ, ತಿಳುವಳಿಕೆ ಹಾಗೂ ಅಧ್ಯಯನದಿಂದ ದೇಶವನ್ನು ಮುನ್ನೆಡಸಿದ ಆರ್ಥಿಕ ತಜ್ಞರನ್ನು ಹೀಯಾಳಿಸುವುದು ತರವಲ್ಲ, ಅದಾಗ್ಯೋ ಭೂಮಿಯ ಮೇಲೆ ಜೀವಂತವಿಲ್ಲದ, ಉದಾತ್ತ “ಆತ್ಮ”ವನ್ನು ಆರೋಪಿಸುವುದು ಒಪ್ಪುವಂತದ್ದಲ್ಲ.1991ರ ಅಸ್ಸಾಂ ನಿವಾಸಿ ಕಾನೂನು ಹಾಗೂ 2003ರ ಜನತಾ ಪ್ರಾತಿನಿಧ್ಯ ತಿದ್ದುಪಡಿ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದೆ ಎಂದು ಬೆಳವಾಡಿಯವರನ್ನು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತರರಾದ ಶ್ರೀ Brijesh Kalappa ಅವರನ್ನು ಸಂಪರ್ಕಿಸಿ ಅವರ ಮೂಲಕ ವಿಷಾದ ವ್ಯಕ್ತಪಡಿಸಿರುವ ಅವರ ವಿಶಾಲ ಹೃದಯವನ್ನು ನಾನು ಪ್ರಶಂಸಿಸುತ್ತೇನೆ. ನಿಜವಾಗಿಯೂ ಪ್ರಜಾಪ್ರಭುತ್ವವಾದಿಗಳು ಇರಬೇಕಾದ್ದೂ ಹೀಗಿಯೇ…! ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read