ಬೆಂಗಳೂರು : ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಕೋರ್ಸುಗಳಿಗೆ ಪ್ರವೇಶಾತಿ ಶುಲ್ಕ, ಸೀಟು ಹಂಚಿಕೆ ಪ್ರಮಾಣ ನಿಗದಿಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಅಧಿನಿಯಮ, 2015 (Act No.39 of 2015)ರಲ್ಲಿನ ಪ್ರಕರಣ 4(ಎ) ಮತ್ತು 4(ಬಿ) ರಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ, ನಿಗಧಿಯ ಸಂಬಂಧವಾಗಿ ಸರ್ಕಾರವು, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ/ಪತಿನಿಧಿಗಳೊಂದಿಗೆ ಸಮ್ಮತಾಭಿಪ್ರಾಯದ ಒಪ್ಪಂದಕ್ಕೆ/ಒಡಂಬಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರಂತೆ 2024-25ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ(ಯು.ವಿ.ಸಿ.ಇ)/ಮೈಸೂರು ವಿಶ್ವವಿದ್ಯಾಲಯ (ಶೇ.50ರಷ್ಟು ಸೀಟುಗಳು)/ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು/ಖಾಸಗಿ ಅನುದಾನಿತ/ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಪ್ರವೇಶಾತಿ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸಿ, ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರಂತೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ/ವಿಶ್ವವಿದ್ಯಾಲಯ/ಖಾಸಗಿ ಅನುದಾನಿತ/ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ, ಸೀಟು ಹಂಚಿಕೆ ಪ್ರಮಾಣ ಮತ್ತು ಶುಲ್ಕ ನಿಗದಿಯ ಬಗ್ಗೆ ದಿನಾಂಕ:09.05.2025ರಂದು ಮಾನ್ಯ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿರುತ್ತದೆ. ಸದರಿ ಸಭೆಯಲ್ಲಿನ ನಿರ್ಣಯದ ಹಿನ್ನೆಲೆಯಲ್ಲಿ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ/ ಪ್ರತಿನಿಧಿಗಳಾದ ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (KUPECA), ಕರ್ನಾಟಕ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘ (KRLMPCA) ಮತ್ತು ಅಸೋಸಿಯೇಷನ್ ಆಫ್ ಮೈನಾರಿಟಿ ಪ್ರೊಫೆಷನಲ್ ಕಾಲೇಜ್ ಇನ್ ಕರ್ನಾಟಕ (AMPCK) ಸಂಘಗಳ ಪದಾಧಿಕಾರಿಗಳೊಂದಿಗೆ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ನಿಗಧಿಪಡಿಸಿರುವ ಬೋಧನಾ ಶುಲ್ಕದ ಮೇಲೆ ಶೇ.7.5 ರಷ್ಟು ಹೆಚ್ಚಿಸಲು ಸರ್ಕಾರದಿಂದ ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿರುತ್ತದೆ.
KUPECA ಸಂಘದೊಂದಿಗೆ ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ.45 ರಷ್ಟು ಪ್ರಮಾಣದ ಸೀಟುಗಳನ್ನು KUPECA ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದು, ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಾಗೂ ಶೇ.30 ರಷ್ಟು ಸೀಟುಗಳನ್ನು ಕಾಮೆಡ್-ಕೆ ಪರೀಕ್ಷೆಯ ಮೆರಿಟ್ ಪಟ್ಟಿಯಂತೆ ಹಾಗೂ ಶೇ.15 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ/ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ (NRI/NRI Sponsored) ಮತ್ತು ಶೇ.10 ರಷ್ಟು ಸೀಟುಗಳನ್ನು ಪಾರದರ್ಶಕ ಅಧಿಸೂಚನೆ ಮೂಲಕ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಪ್ರವೇಶಾತಿ ಮಾಡಬೇಕಾಗಿರುತ್ತದೆ.
ಅದೇ ರೀತಿ, KRLMPCA ಹಾಗೂ AMPCK ಪದಾಧಿಕಾರಿಗಳೊಂದಿಗೆ ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ.40 ರಷ್ಟು ಪ್ರಮಾಣದ ಸೀಟುಗಳನ್ನು KRLMPCA ಹಾಗೂ AMPCK ಸರ್ಕಾರಕ್ಕೆ ಬಿಟ್ಟುಕೊಡಲಾಗಿದ್ದು, ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಹಾಗೂ ಶೇ. 30 ರಷ್ಟು ಸೀಟುಗಳನ್ನು KRLMPCA ಹಾಗೂ AMPCK ವತಿಯಿಂದ ನಡೆಸುವ ಪ್ರವೇಶ ಪರೀಕ್ಷೆಯ ಮೆರಿಟ್ ಪಟ್ಟಿಯಂತೆ ಪ್ರವೇಶಾತಿ ಮಾಡಬೇಕು. ಶೇ.20 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ / ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ (NRI/NRI Sponsored) ಮತ್ತು ಶೇ.10 ರಷ್ಟು ಪಾರಕರ್ಶಕ ಅಧಿಸೂಚನೆ ಮೂಲಕ ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಪ್ರವೇಶಾತಿ ಮಾಡಬೇಕಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಆದೇಶದಲ್ಲಿ 2024-25ನೇ ಶೈಕ್ಷಣಿಕ ಸಾಲಿನಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅಧೀನದ ಘಟಕ ಕಾಲೇಜುಗಳಲ್ಲಿ ನಡೆಸುತ್ತಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳ ಶೇ.100 ರಷ್ಟು ಸೀಟುಗಳ ಪೈಕಿ ಶೇ.50 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಾಗೂ ಉಳಿದ ಶೇ. 50ರಷ್ಟು ಸೀಟುಗಳಿಗೆ ಸರ್ಕಾರವು ಖಾಸಗಿ ಕಾಲೇಜುಗಳಿಗೆ ಗೊತ್ತುಪಡಿಸಿದ ಶುಲ್ಕವನ್ನು ನಿಗಧಿಪಡಿಸಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (5) ರ ಆದೇಶದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅನುಮೋದಿತ ಪ್ರವೇಶಾತಿಯ 50% ಕ್ಕಿಂತ ಕಡಿಮೆ ಪ್ರವೇಶಾತಿ ದಾಖಲಾಗುತ್ತಿರುವ ಕೆಳಕಂಡ ಕೋರ್ಸುಗಳ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನಿಂದ 50% ರಷ್ಟು ಶುಲ್ಕ ವಿನಾಯಿತಿ ನೀಡಲಾಗಿದೆ.
1) Mechanical Engineering
2) Textile Technology
3) Automobile Engineering
4) Silk Technology
5) Civil Engineering
ಮುಂದುವರಿದು, 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ)/ ಮೈಸೂರು ವಿಶ್ವವಿದ್ಯಾಲಯ (ಶೇ.50 ರಷ್ಟು ಸೀಟುಗಳು) / ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು (ಶೇ.50 ರಷ್ಟು ಸೀಟುಗಳು) ಮತ್ತು ಸ್ನಾತಕೋತ್ತರ ಕೇಂದ್ರಗಳು / ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು / ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಭರಿಸಬೇಕಾದ ಬೋಧನಾ ಶುಲ್ಕದಲ್ಲಿ ಶೇ. 5 ರಷ್ಟು ಮಾತ್ರ ಹೆಚ್ಚಿಸಲು ತೀರ್ಮಾನಿಸಿದೆ. ಅನುದಾನರಹಿತ ಕಾಲೇಜುಗಳಿಗೆ ಸಂಬಂಧಿಸಿದಂತೆ ಸಮ್ಮತಾಭಿಪ್ರಾಯದ ಒಪ್ಪಂದದಂತೆ 7.5% ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ. ಅನುದಾನರಹಿತ ಕಾಲೇಜುಗಳು ಮಾತ್ರ ವರ್ಷಕ್ಕೆ ಇತರೆ ಶುಲ್ಕ ರೂ.20,000/-ಗಳನ್ನು ಮೀರದಂತೆ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಪಡೆಯಲು, ತದನಂತರದ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಯವರು ಇತರೆ ಶುಲ್ಕವನ್ನು ಪಡೆಯುವ ಬಗ್ಗೆ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರವು, 2025-26ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ)/ ಮೈಸೂರು ವಿಶ್ವವಿದ್ಯಾಲಯ (ಶೇ.50 ರಷ್ಟು ಸೀಟುಗಳು) / ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಶೇ.50ರಷ್ಟು ಸೀಟುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಪ್ರವೇಶಾತಿ ಶುಲ್ಕ (ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ, ಇತರೆ ಶುಲ್ಕ) ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ಅನುಬಂಧದಲ್ಲಿರುವಂತೆ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ನಿಗದಿಪಡಿಸಿ, ಆದೇಶಿಸಿದೆ
ಷರತ್ತು ಮತ್ತು ನಿಬಂಧನೆಗಳು:
1) ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು / ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು / ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ) / ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜು/ಖಾಸಗಿ ಅನುದಾನರಹಿತ (ಅಲ್ಪಸಂಖ್ಯಾತ ಹಾಗೂ ಅಲ್ಪಸಂಖ್ಯಾತವಲ್ಲದ) ఇంజినియరింగా ಕಾಲೇಜುಗಳಲ್ಲಿ ໖….. ಅನುಮೋದಿಸಿರುವ/ನಿಗಧಿಪಡಿಸಿರುವ ಪ್ರತಿ ಕೋರ್ಸುಗಳ ಒಟ್ಟು ಪ್ರವೇಶ ಮಿತಿಯ ಮೇಲೆ ಶೇ.5 ರಷ್ಟು ಸಂಖ್ಯಾಧಿಕ ಸೀಟುಗಳನ್ನು (Supernumerary Seats (SNO) ಯಾವುದೇ ಬೋಧನಾ ಶುಲ್ಕವಿಲ್ಲದೆ (Tuition fee waiver schemes) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ರೂ.8.00 ಲಕ್ಷದ ಮಿತಿಯೊಳಗಿರಬೇಕು) ಮೆರಿಟ್ ಆಧಾರದ ಮೇಲೆ ಸೀಟುಗಳನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ, ಹಂಚಿಕೆ ಮಾಡುವುದು.
(ಅ) ರಾಜ್ಯ ಸರ್ಕಾರವು ನಿಗದಿಪಡಿಸಿರುವ ಬೋಧನಾ ಶುಲ್ಕವನ್ನು ಸಂಖ್ಯಾಧಿಕ (SNQ) ಸೀಟುಗಳನ್ನು ಪಡೆದ ಫಲಾನುಭವಿಯು ಭರಿಸತಕ್ಕದ್ದಲ್ಲ. ಆದರೆ, ಈ ಅಭ್ಯರ್ಥಿಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಿಗಧಿಪಡಿಸಿರುವ ಶುಲ್ಕ ರೂ.10,610/-ಗಳನ್ನು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸತಕ್ಕದ್ದು.
(ಆ) ಇದು ಎಐಸಿಟಿಇ ಯೋಜನೆಯಾಗಿದ್ದು, ಈ ಸಂಖ್ಯಾಧಿಕ (SNQ) ಸೀಟುಗಳ ಹಂಚಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳು ಪಡೆದ ರಾಂಕ್ (Rank) ಆಧಾರದ ಮೇಲೆ ಮಾತ್ರ ಭರ್ತಿ ಮಾಡತಕ್ಕದ್ದು.
(ಇ) ಸಂಖ್ಯಾಧಿಕ (SNQ) ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅಂತಹ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಸೀಟುಗಳಾಗಿ ಮತ್ತು ಇತರೆ ಯಾವುದೇ ಕೋಟಾದ ಸೀಟುಗಳನ್ನಾಗಿ ಪರಿವರ್ತಿಸತಕ್ಕದ್ದಲ್ಲ ಹಾಗೂ ಈ ಪ್ರವೇಶಾತಿಗಳಿಗೆ 2ನೇ ವರ್ಷದ / 3ನೇ ಸೆಮಿಸ್ಟರ್ ಲ್ಯಾಟರಲ್ ಎಂಟ್ರಿ ಪ್ರವೇಶಾತಿಗೆ ಪರಿಗಣಿಸತಕ್ಕದ್ದಲ್ಲ.
(ಈ) ಸಂಖ್ಯಾಧಿಕ (SNQ) ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ರವರಿಗೆ ಪೂರ್ಣ ವಿವರಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಲ್ಲಿಸತಕ್ಕದ್ದು ಎಂದು ತಿಳಿಸಿದೆ.











