ಹಾಸನ : ಹಾಸನದಲ್ಲಿ ಹೃದಯಾಘಾತ ಹೆಚ್ಚಳಕ್ಕೆ ‘ರೆಡ್ ಮೀಟ್’ ಕಾರಣ ಎಂದು ಶಾಸಕ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತನಾಡಿದ ಅವರು ಹಾಸನದಲ್ಲಿ ಬಾರ್ & ರೆಸ್ಟೋರೆಂಟ್ ಸಂಖ್ಯೆ ಹೆಚ್ಚಾಗಿದೆ. ಆದಾಯ ಬರುತ್ತೆ ಅಂತ ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ . ಬಾರ್ ಗಳಲ್ಲಿ ಕುಡಿದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಇತ್ತೀಚೆಗೆ ಜನರು ಬೀಗರೂಟದಲ್ಲಿ ಹೆಚ್ಚು ರೆಡ್ ಮೀಟ್ ತಿನ್ನುತ್ತಾರೆ. ಇದರಿಂದ ಹೃದಯಾಘಾತ ಹೆಚ್ಚಳವಾಗುತ್ತಿದೆ. ಬಾರ್ ಗಳಲ್ಲಿ ಕೂಡ ಹೆಚ್ಚಿನ ಜನರು ಮದ್ಯ ಕುಡಿದು ರೆಡ್ ಮೀಟ್ ತಿನ್ನುತ್ತಾರೆ . ಇದರಿಂದ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದೆ ಎಂದು ಹೇಳಿದರು. ಹಾಸನದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂಭವಿಸುತ್ತಿರುವ ಹೃದಯಾಘಾತಕ್ಕೆ 40 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
You Might Also Like
TAGGED:ಹೃದಯಾಘಾತ