ಉದ್ಯೋಗ ವಾರ್ತೆ :  ‘ಭಾರತೀಯ ವಾಯು ಪಡೆ’ಯಿಂದ ‘ಅಗ್ನಿವೀರ್’ ವಾಯು ಪ್ರವೇಶ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನ

ದುನಿಯಾ ಡಿಜಿಟಲ್ ಡೆಸ್ಕ್ :    ಭಾರತೀಯ ವಾಯು ಪಡೆಯಿಂದ ಅಗ್ನಿಪತ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಥವಾ ಡಿಪ್ಲೋಮಾ ವಿಭಾಗದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಷ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‍ಸ್ಟ್ರುಮೆಂಟ್ ಟೆಕ್ನಾಲಜಿ, ಇನ್ಪಾರ್ಮೇಶನ್ ಟೆಕ್ನಾಲಜಿಯಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು. ಇಲ್ಲವೇ 02 ವರ್ಷದ ವೃತ್ತಿಪರ ಕೋರ್ಸ್‍ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡಿ ಶೇ.50 ರಷ್ಟು ಅಥವಾ ಯಾವುದೇ ಪಿಯುಸಿ ವಿಭಾಗದಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅಭ್ಯರ್ಥಿಯು 2005ರ ಜುಲೈ, 02 ರಿಂದ 2009ರ ಜನವರಿ, 02 ರ ನಡುವೆ ಜನಿಸಿರಬೇಕು. (ಎರಡೂ ದಿನಾಂಕಗಳು ಸೇರಿದಂತೆ) ಅರ್ಜಿ ಶುಲ್ಕ 550 ರೂ.ಗಳಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರ ಮತ್ತು ಸೂಚನೆಗಳಿಗೆ ವೆಬ್‍ಸೈಟ್ https://agnipathvayu.cdac.in ನೋಡಬಹುದು. ವೆಬ್‍ಸೈಟ್‍ನಲ್ಲಿ 2025 ರ ಜುಲೈ, 11 ರಿಂದ 31 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read