ಬೆಳಗಾವಿ: ಇಂದಿನ ಸರ್ಕಾರಗಳು ನೀಡುತ್ತಿರುವ ಪುಕ್ಸಟ್ಟೆ ಭಾಗ್ಯಗಳಿಂದ ಜನ ಸೋಮಾರಿಗಳಾಗುತ್ತಿದ್ದಾರೆ. ಸರ್ಕಾರಗಳು ಕೊಡುತ್ತಿರುವ ಇಂತಹ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲವಾಗುವುದಿಲ್ಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ್ದಾರೆ.
ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನ ಚಿಕ್ಬಲಕಟ್ಟೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಕ್ಸಟ್ಟೆ ಸ್ಕೀಮ್ ನಿಂದ ಜನರಲ್ಲಿ ದುಡಿಯುವ ಮನೋಭಾವ ಕ್ಷೀಣಿಸಿದೆ. ಸೋಮಾರಿತನ ಹೆಚ್ಚಳವಾಗುತ್ತಿರುವುದು ಬೇಸರದ ವಿಷಯವಾಗಿದೆ. ದೇಶದಲ್ಲಿ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ. ಯೋಧರು ದೇಶ ಕಾಯ್ದರೆ ರೈತರು ನಮಗೆ ಅನ್ನ ನೀಡುತ್ತಾರೆ. ಕಷ್ಟಪಟ್ಟು ದುಡಿದರೆ ಭೂತಾಯಿ ನಮ್ಮನೆಂದು ಕೈಬಿಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.