ಕೋಲಾರ: ಶಾಲೆಯಲ್ಲಿ ಅರಳಿಕಾಯಿ ತಿಂದು 7 ಮಕ್ಕಳು ಅಸ್ವಸ್ಥರಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪುತ್ರಸೊನ್ನೇಹಳ್ಳಿಯಲ್ಲಿ ನಡೆದಿದೆ.
ಶಾಲೆಯಲ್ಲಿ ಆಟವಾಡುತ್ತಿದ್ದ ಪ್ರಾಥಮಿಕ ಶಾಲೆಯ 7 ಮಕ್ಕಳು ಅರಳಿಕಾಯಿ ತಿಂದಿದ್ದು, ಅವನ್ನು ತಿನ್ನುತ್ತಿದ್ದಂತೆ ಮಕ್ಕಳಿಗೆ ವಾಂತಿ ಭೇದಿ ಶುರುವಾಗಿದೆ. ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕಿತ್ಸೆ ಬಳಿಕ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ.
‘ಬೆಂಗಳೂರು ನಗರ ಜಿಲ್ಲೆ’ಯಲ್ಲಿ ಸಕ್ರಿಯವಾಗಿರದ ರಾಜಕೀಯ ಪಕ್ಷಗಳಿಗೆ ನೋಟಿಸ್.!