ಬೆಂಗಳೂರು : ಇತ್ತೀಚೆಗೆ ತೆರೆಕಂಡ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಸಿನಿರಸಿಕರಿಗೆ ಸಖತ್ ಇಷ್ಟ ಆಗಿತ್ತು. ವಿಭಿನ್ನ ಕಥೆಹಂದರವುಳ್ಳ ಮಾಸ್ ಸಿನಿಮಾ ‘ಮ್ಯಾಕ್ಸ್ ‘ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಿತ್ತು.
ಈ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಿಸಿದ್ದಾರೆ. ಹೌದು, ಬರೀ 6 ತಿಂಗಳಲ್ಲೇ ಹೊಸ ಸಿನಿಮಾ ಮಾಡಿ ಪ್ರೇಕ್ಷಕರ ಎದುರು ತರಲಿದ್ದಾರಂತೆ. ಜುಲೈ 7 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.
ಮ್ಯಾಕ್ಸ್ ಚಿತ್ರವನ್ನು ನಿರ್ದೇಶಿಸಿದ್ದ ತಮಿಳಿನ ವಿಜಯ್ ಕಾರ್ತಿಕೇಯ ಅವರು ಸುದೀಪ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಕೆ.47 ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ಸುದೀಪ್ ‘ಬಿಲ್ಲ ರಂಗ ಭಾಷ’ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದು, ಈ ಸಿನಿಮಾ ತೆರೆಗೆ ಬರಲು ಬಹಳ ಸಮಯ ಬೇಕು. ಅದರೊಳಗೆ ಕೆ.47 ಸಿನಿಮಾ ತೆರೆಗೆ ಬರಲಿದೆ. ಎಲ್ಲ ಅಂದುಕೊಂಡಂತೆ ಆದರೆ ಡಿ.25 ಕ್ಕೆ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ಹಾಕಿಕೊಂಡಿದೆ ಚಿತ್ರತಂಡ.