ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ: ಇನ್ನು 24 ಗಂಟೆಯಲ್ಲೇ ತಾತ್ಕಾಲಿಕ ನಕ್ಷೆ ವಿತರಣೆ

ಬೆಂಗಳೂರು: ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮನೆ ನಿರ್ಮಾಣಕ್ಕೆ ಬಿಲ್ಡಿಂಗ್ ಪ್ಲಾನ್ ಪಡೆಯಲು ಸಾರ್ವಜನಿಕರ ಅಲೆದಾಟ ತಪ್ಪಿಸಿ ಕೇವಲ 24 ಗಂಟೆಯಲ್ಲಿ ತಾತ್ಕಾಲಿಕ ನಕ್ಷೆ ನೀಡುವ ನಂಬಿಕೆ ನಕ್ಷೆ ವಿತರಿಸುವ ಕಾರ್ಯಕ್ರಮವನ್ನು ಬಿಬಿಎಂಪಿ ಮರು ಜಾರಿಗೊಳಿಸಿದೆ.

2024ರ ಮಾರ್ಚ್ ನಿಂದ ನಂಬಿಕೆ ನಕ್ಷೆ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಅನ್ವಯ 375 ಚದರ ಮೀಟರ್ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ವಿಳಂಬವಿಲ್ಲದೆ ನಕ್ಷೆ ವಿತರಿಸಲಾಗುತ್ತದೆ. ತಾತ್ಕಾಲಿಕ ನಕ್ಷೆ ನೀಡಿದ ನಂತರ ದಾಖಲಾತಿ ಪರಿಶೀಲಿಸಿ 15 ದಿನಗಳಲ್ಲಿ ಅನುಮೋದಿತ ನಕ್ಷೆ ನೀಡಲಾಗುವುದು. ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ಅರ್ಜಿಗಳ ಪರಿಶೀಲನೆ ನಡೆಸಿ ಅನುಮೋದನೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನಂಬಿಕೆ ನಕ್ಷೆ ಯೋಜನೆಯಿಂದಾಗಿ ಮನೆ ನಿರ್ಮಿಸುವ ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕ ರೀತಿಯಲ್ಲಿ ಯಾವುದೇ ಖರ್ಚಿಲ್ಲದೆ ಸೌಲಭ್ಯ ಪಡೆದುಕೊಳ್ಳಬಹುದು. ಈ ಹಿಂದೆ ತಿಂಗಳುಗಟ್ಟಲೆ ನಂಬಿ ನಕ್ಷೆ ಪಡೆಯಲು ಕಾಯಬೇಕಿತ್ತು, ಇದರಿಂದ ಸಾರ್ವಜನಿಕರು ಹೈರಾಣಾಗಿದ್ದರು. ಈ ಸಮಸ್ಯೆಗೆ ಪರಿಹಾರ ಒದಗಿಸಲು ಕಡಿಮೆ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಯಾರೂ ಅಡ್ಡಿ ಮಾಡದಂತೆ ಪ್ಲಾನ್ ವಿತರಿಸಲು ಆನ್ಲೈನ್ ಸೌಲಭ್ಯಕ್ಕೆ ಕಳೆದ ಸೆಪ್ಟೆಂಬರ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದು, ಇದುವರೆಗೆ 9,000 ಮಂದಿಗೆ ನಕ್ಷೆ ವಿತರಿಸಲಾಗಿದೆ.

ಇದಕ್ಕಾಗಿ ಸ್ವತ್ತಿನ ಇ-ಖಾತಾ, ನಿವೇಶನದ ಭಾವಚಿತ್ರ, ಸ್ವತ್ತಿನ ವಿಸ್ತೀರ್ಣ ಅಗತ್ಯ ದಾಖಲೆಗಳಾಗಿವೆ. ಇ-ಖಾತಾ ಕಡ್ಡಾಯ ಮಾಡಲಾಗಿದ್ದು, ಇ-ಖಾತಾದಲ್ಲಿ ಸ್ವತ್ತಿನ ವಿವರ, ಆಸ್ತಿದಾರರ ಮಾಹಿತಿ, ಚೆಕ್ಕುಬಂದಿ, ತೆರಿಗೆ ಪಾವತಿ ರಶೀದಿ, ವಿಳಾಸ ದೃಢೀಕರಣ, ಆಧಾರ್ ಕಾರ್ಡ್ ಮಾಹಿತಿ ಪರಿಶೀಲಿಸಿ ಅರ್ಜಿಯನ್ನು ಅನುಮೋದಿಸಲಾಗುವುದು.

https://bpas.bbmpgov.in/BPMASClint4/Default.aspx?TAV-1 ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read