ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಪತ್ನಿಯೋರ್ವಳು ಪತಿಯನ್ನೇ ಹೊಡೆದುಕೊಂದು ಬಾತ್ ರೂಮ್ ನಲ್ಲಿ ಬಿದ್ದು ಸಾವನ್ನಪ್ಪಿದ್ದಾಗಿ ಕಥೆ ಕಟ್ಟಿರುವ ಘಟನೆ ನಡೆದಿದೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 41 ವರ್ಷದ ಭಾಸ್ಕರ್ ಪತ್ನಿಯಿಂದಲೇ ಕೊಲೆಯಾದ ಪತಿ. ಶೃತಿ ಪತಿಯನ್ನೇ ಹತ್ಯೆಗೈದ ಪತ್ನಿ.
ಪತಿ ಭಾಸ್ಕರ್ ಮನೆಗೆಲಸದವಳ ಜೊತೆ ಸಲುಗೆಯಿಂದ ಇದ್ದ ಕಾರಣಕ್ಕೆ ಎರಡು ದಿನಗಳ ಹಿಂದೆ ಪತ್ನಿ ಶೃತಿ ಜಗಳವಾಡಿದ್ದಳು. ಇದೇ ವಿಚಾರವಾಗಿ ಕೋಪದ ಬರದಲ್ಲಿ ಪತ್ನಿ ಶೃತಿ ಪತಿಯ ಮುಖಕ್ಕೆ ಹೊಡೆದಿದ್ದಾಳೆ. ಸ್ಥಳದಲ್ಲೇ ಪತಿ ಸಾವನ್ನಪ್ಪಿದ್ದಾರೆ.
ಪತಿಯ ಕೊಲೆ ಬಳಿಕ ಸ್ನಾನ ಮಾಡಿಸಿ ಮಲಗಿಸಿದ್ದ ಶೃತಿ, ಕುಡಿದು ಬಂದು ಬಾತ್ ರೂಮ್ ನಲ್ಲಿ ಬಿದ್ದಿದ್ದರು ಎಂದು ಕಥೆ ಕಟ್ಟಿದ್ದಾಳೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆಪಾಳ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.