ಹಾಸನ : ಹಾಸನದಲ್ಲಿ ಹೃದಯಾಘಾತಕ್ಕೆ 35 ನೇ ಬಲಿಯಾಗಿದ್ದು, ಕುಸಿದು ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಹೃದಯಾಘಾತವಾಗಿ 55 ವರ್ಷದ ಮಹಿಳೆ ಬಿ.ಎನ್ ವಿಮಲಾ ಮೃತಪಟ್ಟಿದ್ದಾರೆ. ಹಾಸನದ ದಾಸರ ಕೊಪ್ಪಲಿನಲ್ಲಿ ವಿಮಲಾ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲೇ ವಿಮಲಾ ಮೃತಪಟ್ಟಿದ್ದಾರೆ.
21 ವರ್ಷದ ಯುವಕ ಹಾರ್ಟ್ ಅಟ್ಯಾಕ್ ಗೆ ಬಲಿ
ಹಾಸನ ಹೊರವಲಯದ ಚಿಕ್ಕಕೊಂಡಗುಳದಲ್ಲಿ 21 ವರ್ಷದ ಯುವಕ ಮದನ್ ಮೃತಪಟ್ಟಿದ್ದಾರೆ. ಮೃತ ಮದನ್ ಹಾಸನ ತಾಲೂಕಿನ ಚಟ್ನಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ತಾಯಿಯ ಜೊತೆಗೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ ಮದನ್ ಎರಡು ದಿನದ ಹಿಂದೆ ಚಿಕ್ಕಕೊಂಡಗುಳದ ಭಾವನ ಮನೆಗೆ ಬಂದಿದ್ದರು. ರಾತ್ರಿ ಮನೆಯಲ್ಲಿದ್ದಾಗ ಎದೆ ನೋವಿನಿಂದ ಮದನ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
You Might Also Like
TAGGED:ಹಾಸನ