ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ, ವಿಶೇಷವಾಗಿ ಯುವಜನರಲ್ಲಿ ಹಠಾತ್ ಹೃದಯಾಘಾತಗಳು ಸಂಭವಿಸುತ್ತಿರುವುದು ಚಿಂತಾಜನಕ ಸಂಗತಿ. ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಈ ಗಂಭೀರ ಸಮಸ್ಯೆ ಕುರಿತು ಸಚಿವ ಈಶ್ವರ್ ಖಂಡ್ರೆ ಸಭೆ ನಡೆಸಿದರು.
ಬದಲಾಗುತ್ತಿರುವ ಆಹಾರ ಪದ್ಧತಿ, ಜೀವನಶೈಲಿ, ತೀವ್ರ ಮನೋಒತ್ತಡ, ನಿದ್ರೆಯ ಕೊರತೆ, ಮತ್ತು ಅತಿಯಾದ ಮೊಬೈಲ್ ಬಳಕೆ ಇತ್ಯಾದಿ ಅಂಶಗಳು ಈ ಪ್ರವೃತ್ತಿಗೆ ಕಾರಣವಾಗುತ್ತಿರುವುದಾಗಿ ತಾತ್ಕಾಲಿಕವಾಗಿ ಅಂದಾಜಿಸಲಾಗಿದೆ. ಇದನ್ನು ತಡೆಗಟ್ಟಲು ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಜೀವನವನ್ನ ಒದಗಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
* ಹೃದಯ ಆರೈಕೆ ಕುರಿತ ಜಾಗೃತಿ ಅಭಿಯಾನಳನ್ನು ಹಮ್ಮಿಕೊಳ್ಳುವುದು.
* ಉಚಿತ ಹೃದಯ ಸಂಬಂಧಿ ಆರೋಗ್ಯ ತಪಾಸಣೆ.
* ಜಿಲ್ಲೆ, ತಾಲೂಕು, CHC, PHC ಮಟ್ಟದ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿತ ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚಿಸುವುದು.
* ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಯಾವುದೇ ಅಂಶವನ್ನು ನಿರ್ಲಕ್ಷಿಸದೇ, ತಕ್ಷಣ ಕಾರ್ಯಚರಣೆ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಿರುವಂತೆ ನಿರ್ದೇಶನ ನೀಡಿದೆ ಎಂದು ಮಾಹಿತಿ ನೀಡಿದರು.