MLC ರವಿಕುಮಾರ್ ಬುದ್ಧಿ ಸರಿಯಿಲ್ಲ, ಅವರು ನಿಮ್ಹಾನ್ಸ್ ನಲ್ಲಿ ಇರಬೇಕು: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ: ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರವಿಕುಮಾರ್ ನಿಮ್ಹಾನ್ಸ್ ನಲ್ಲಿ ಇರಬೇಕು. ಅವರು ಮೂಲತಃ ಬಿಜೆಪಿಯವರಲ್ಲ, ಆರ್ ಎಸ್ ಎಸ್ ನಿಂದ ಬಂದವರು. ಮನುಸ್ಮೃತಿ ಹಿನ್ನೆಲೆಯಿಂದ ರವಿಕುಮಾರ್ ಬಂದವರು. ಮನುಸ್ಮೃತಿಯಲ್ಲಿ ಮಹಿಳೆಯರ ಬಗ್ಗೆ ಏನು ಹೇಳಲಾಗಿದೆ ಎಂಬುದು ಗೊತ್ತಿದೆ. ಬಿಜೆಪಿ ನಯಾಕರು ಸಂಸ್ಕೃತಿ ಬಗ್ಗೆ ಹೇಳುತ್ತಾರೆ. ಆದರೆ ಅವರ ಪಕ್ಷದ ನಾಯಕರಿಗೆ ಯಾವುದೂ ಅನ್ವಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ರವಿಕುಮಾರ್ ಈ ಹಿಂದೆ ಕಲಬುರಗಿ ಬಗ್ಗೆ, ಕಲಬುರ್ಗಿ ಜಿಲ್ಲಾಧಿಕಾರಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು. ಕೋರ್ಟ್ ಕ್ಷಮೆಯಾಚಿಸುವಂತೆ ಸೂಚಿಸಿದರೂ ಈವರೆಗೆ ಕ್ಷಮೆ ಕೇಳಿಲ್ಲ. ಉದ್ಧಟತನ ಮೆರೆಯುತ್ತಿದ್ದಾರೆ. ಈಗ ವಿಧಾನಸೌಧದ ಗಾಂಧಿ ಪ್ರತಿ ಎದುರು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅಸಂವಿಧಾನಿಕ ಪದ ಬಳಕೆ ಮಾಡಿ ಅವಮಾನಿಸಿದ್ದಾರೆ. ಇಷ್ಟಾದರೂ ಅವರು ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ ಅವರಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದರು.

ಅವರು ಆಡಿದ ಮಾತುಗಳು ವಿಡಿಯೋದಲ್ಲಿಯೇ ರೆಕಾರ್ಡ್ ಆಗಿದೆ. ಇದಕ್ಕಿಂತ ಸಾಕ್ಷಿಯೇನು ಬೇಕು? ಇದು ಅವರ ಮನಃಸ್ಥಿತಿ ತೋರಿಸುತ್ತಿದೆ. ಕೊಳಕು ಮನಸ್ಸು, ಅವರ ಕೊಳಕು ಬುದ್ದಿ, ಕೊಳಕು ನಾಲಿಗೆ ಇದನ್ನೆಲ್ಲ ಹೇಳಿಸುತ್ತಿದೆ. ಅಂದರೆ ಅವರ ಬುದ್ಧಿ ಸರಿಯಿಲ್ಲ ಹಾಗಾಗಿ ಅವರು ನಿಮ್ಹಾನ್ಸ್ ಗೆ ಹೋಗಬೇಕು.ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದು ಗೊತ್ತಿಲ್ಲ. ಮಾತಿನ ಮೇಲೆ ಹಿಡಿತವಿಲ್ಲ ಎಂದ ಮೇಲೆ ಅವರು ಹುಚ್ಚಾಸ್ಪತ್ರೆಯಲ್ಲಿರಬೇಕು ಎಂದು ಗುಡುಗಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read