BREAKING: ಮಾಡೆಲ್ ಮೇಲೆ ರಾಡ್ ನಿಂದ ಹಲ್ಲೆ: ಹಣ, ಪಾಸ್ಪೋರ್ಟ್, ವಾಚ್, ಸನ್ ಗ್ಲಾಸ್ ಸೇರಿ ದುಬಾರಿ ವಸ್ತು ಕಳವು

ಬೆಂಗಳೂರು: ಹುಬ್ಬಳ್ಳಿ ಮಾಡೆಲ್ ಧ್ರುವ ನಾಯ್ಕ್ ಮೇಲೆ ಸೀಹಿ ಬರ್ಡ್ ಟ್ರಾವೆಲ್ಸ್ ಬಸ್ ಸಿಬ್ಬಂದಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿ ಘಟನೆ ನಡೆದಿದೆ. ಜುಲೈ 1ರಂದು ರಾತ್ರಿ 11.30ರ ಸುಮಾರಿಗೆ ಬಸ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಬೆಂಗಳೂರಿಗೆ ಬಂದಿದ್ದ ಮಾಡೆಲ್ ಧ್ರುವ ರಾತ್ರಿ ಹುಬ್ಬಳ್ಳಿಗೆ ತೆರಳಲು ಬಸ್ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ ಸೀ ಬರ್ಡ್ ಕಚೇರಿಯ ಮುಂದೆ ಸ್ನೇಹಿತರ ಜೊತೆಗೆ ಬಂದಿದ್ದಾಗ ಹಲ್ಲೆ ನಡೆಸಲಾಗಿದೆ.

ಧ್ರುವ ಅವರ ಇಬ್ಬರು ಸ್ನೇಹಿತರು ಬಸ್ ನಲ್ಲಿ ಕುಳಿತಿದ್ದರು. ಮತ್ತೊಬ್ಬ ಸ್ನೇಹಿತನ ಜೊತೆಗೆ ಧ್ರುವ ಹೊರಗೆ ನಿಂತಿದ್ದು, ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಬಸ್ ಡೋರ್ ಲಾಕ್ ಆಗಿ ನಿಧಾನವಾಗಿ ಚಲಿಸಲು ಆರಂಭಿಸಿದ್ದು ಕೈ ಅಡ್ಡ ಇಟ್ಟು ಬಾಗಿಲು ತೆಗೆಯುವಂತೆ ಧ್ರುವ ಮನವಿ ಮಾಡಿದ್ದಾರೆ. ಇದೇ ವಿಚಾರವಾಗಿ ಸಿಬ್ಬಂದಿ ಮತ್ತು ಧ್ರುವ ಮಧ್ಯೆ ಗಲಾಟೆ ಆಗಿದೆ. ಬಸ್ ಸಿಬ್ಬಂದಿ ಕೋಲು ಮತ್ತು ರಾಡ್ ನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಇದೇ ವೇಳೆ ದುಬಾರಿ ಬೆಲೆಯ ಶೂ, ಏರ್ ಬರ್ಡ್ಸ್, 44 ಸಾವಿರ ರೂ. ಬೆಲೆಯ ಸನ್ ಗ್ಲಾಸ್, ಪಾಸ್ಪೋರ್ಟ್, 1.85 ಲಕ್ಷ ರೂ. ಬೆಲೆಯ ಪ್ಲಾಟಿನ ಪೆಂಡೆಂಟ್ ಇರುವ ಸಿಲ್ವರ್ ಚೈನ್, 45 ಸಾವಿರ ರೂ. ಬೆಲೆಯ ವಾಚ್, ಪ್ಲಾಟಿನಂ ರಿಂಗ್, ಪರ್ಸ್ ನಲ್ಲಿದ್ದ 10,000 ರೂ. ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read